ಶುಭದಾ ಶಾಲೆಯಲ್ಲಿ 70 ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೦ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಶೈಕ್ಷಣಿಕ ಸಲಹಾಗಾರರಾದ ಎಚ್. ಎನ್. ಐತಾಳ್ ಧ್ವಜಾರೋಹಣ ಮಾಡಿದರು. ಮುಖ್ಯೋಪಾಧ್ಯಾಯರಾದ ಪ್ರವೀಣ ಕುಮಾರ್, ಕೆ. ಪಿ. ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ಸಂಸ್ಥಾಪಕಡಾ. ಎನ್. ಕೆ. ಬಿಲ್ಲವ, ಕಾರ್ಯದರ್ಶಿ ಬಿ. ಎ. ರಝಾಕ್ ಮತ್ತು ಸಹಶಿಕ್ಷಕರು ಉಪಸ್ಥಿತರಿದ್ದರು.

Click Here

Call us

Call us

ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶಂಶುದ್ದೀನ್‌ರವರು ತಮ್ಮ ಪರಿಣಾಮಕಾರಿ ಭಾಷಣದಿಂದ ಮಕ್ಕಳ ಮನಸ್ಸನ್ನು ಗೆದ್ದರು. ವಿವಿಧ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ವಿದ್ಯಾರ್ಥಿಗಳಾದ ಕು. ಅಖಿಲಾ ಹೆಬ್ಬಾರ್ ನಿರೂಪಣಿಯನ್ನು, ಕು. ಸಿಂಚನ ಜಿ ನಾಯ್ಕ್ ಸ್ವಾಗತವನ್ನು, ಕು. ಕವನ ವಂದನೆಯನ್ನು ಮಾಡಿದರು. ಕೊನೆಯಲ್ಲಿ ಸಿಹಿಯನ್ನು ವಿತರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಪೂರ್ಣವಿರಾಮ ಹಾಕಲಾಯಿತು.

Click here

Click Here

Call us

Visit Now

news_subada-navunda-independence-day

Leave a Reply

Your email address will not be published. Required fields are marked *

5 + 6 =