ಶುಭದಾ ಶಾಲೆ ಮತ್ತು ನಾವುಂದ ಬಿಲ್ಲವ ಸಮಾಜವತಿಯಿಂದ ಪ್ರತಿಭಾ ಪುರಸ್ಕಾರ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬಿಲ್ಲವ ಸಮಾಜ ಸೇವಾ ಸಂಘ ರಿ. ನಾವುಂದ, ಶುಭದಾ ಏಜ್ಯುಕೇಶನಲ್ ಟ್ರಸ್ಟ್ ರಿ. ಮತ್ತು ಬ್ರಹ್ಮ ಬೈದರ್ಕಳ ಗರಡಿ ನಾವುಂದ ಇವರ ಸಹಭಾಗಿತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂದಿರ ಮಸ್ಕಿ-ನಾವುಂದದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ಮತ್ತು ವಿದ್ಯಾರ್ಥಿವೇತನ ವಿತರಿಸಲಾಯಿತು.

Call us

Call us

Visit Now

ಶುಭದಾ ಶಾಲೆಗಳ ಸಂಸ್ಥಾಪಕರು, ಬಿಲ್ಲವ ಸಮಾಜ ಸೇವಾ ಸಂಘದ ಗೌರವ ಸಲಹೆಗಾರರು, ಶ್ರೀ ಬ್ರಹ್ಮ ಬೈದರ್ಕಳ ಗರಡಿ ನಾವುಂದ ಇದರ ಆಡಳಿತ ಸಮಿತಿ ಗೌರವಾಧ್ಯಕ್ಷರು ಆಗಿರುವ ಡಾ|| ಎನ್. ಕೆ. ಬಿಲ್ಲವರವರು ಪುಸ್ತಕ ಮತ್ತು ವಿದ್ಯಾರ್ಥಿವೇತನ ವಿತರಿಸಿ ಮಕ್ಕಳಿಗೆ ಶುಭ ಹಾರೈಸಿದರು.

Click here

Click Here

Call us

Call us

ಈ ಸಂದರ್ಭದಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಸ್ಥಳಿಯ ಪ್ರತಿಭೆ, ಭರತನಾಟ್ಯ ಪ್ರವೀಣೆ ನಾಲ್ಕು ಚಲನ ಚಿತ್ರದಲ್ಲಿ ಅಭಿನಯಿಸುತ್ತಿರುವ ಬಾಲ ನಟಿ ಕುಮಾರಿ ಧನ್ವಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಇವಳು ಮರವಂತೆ ಚಂದ್ರಶೇಖರ ಪೂಜಾರಿ ಮತ್ತು ಜ್ಯೋತಿ ದಂಪತಿಗಳ ಸುಪುತ್ರಿಯಾಗಿದ್ದು, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಕನ್ನಡ ಧಾರವಾಹಿಗಳಲ್ಲಿ ನಟಿಸುವ ಆಶಯ ವ್ಯಕ್ತಪಡಿಸಿದಳು.

Click Here

ಅಂತರಾಷ್ಟ್ರೀಯ ಯೋಗ ಪಟು, ಬೆಳ್ಳಿ ಪದಕ ವಿಜೇತ ಮರವಂತೆಯ ಕುಮಾರ ಕುಶ ಪೂಜಾರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಸಮಾರಂಭಕ್ಕೆ ಬಂದಿರುವ ಆರ್ಥಿಕವಾಗಿ ಕಷ್ಟದಲ್ಲಿರುವ ಇತರ ಹಿರಿಯ ನಾಗರಿಕ ಮಹಿಳೆಯೊಬ್ಬರಿಗೆ ಸಹಾಯಧನ ನೀಡಲಾಯಿತು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗರು ಮಾತನಾಡಿ, ಇದೊಂದು ಮಾದರಿಯ ಕಾರ್ಯಕ್ರಮವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಬಿಲ್ಲವ ಸಮಾಜ ಅಧ್ಯಕ್ಷ ಬಾಬು ಪೂಜಾರಿ, ಸದಸ್ಯರಾದ ಶೇಖರ ಪೂಜಾರಿ, ಉದಯ ಪೂಜಾರಿ, ಸೂರ ಪೂಜಾರಿ, ಚಂದ್ರ ಪೂಜಾರಿ, ಆನಂದ ಪೂಜಾರಿ, ಮತ್ತು ಜಯಲಕ್ಷ್ಮೀ, ಲಲಿತಾ ಪೂಜಾರಿ, ನಾಗಮ್ಮ ಪೂಜಾರಿ, ಸರೊಜ ಪೂಜಾರಿ, ಮತ್ತು ನಾವುಂದ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ ಪೂಜಾರಿ ಹಾಗೂ ಶುಭದಾ ಶಾಲೆಯ ಸಂಚಾಲಕ ಶಂಕರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೀಲಾಧರ ಪೂಜಾರಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಸಿಂಗಾರಿ ಪೂಜಾರಿ ಮತ್ತು ಸುರೇಶ ಕೆ ಪೂಜಾರಿ ಕಾರ್ಯಕ್ರಮ ನಿರ್ವಹಣೆ ಮಾಡಿ ವಂದಿಸಿದರು.

 

Leave a Reply

Your email address will not be published. Required fields are marked *

2 × 2 =