ಉಡುಪಿ: ಉಡುಪಿಯಲ್ಲಿ ಸೆ. 5 ಮತ್ತು 6ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬದ ಅಂಗವಾಗಿ ಉಡುಪಿ ಪ್ರಸ್ ಫೊಟೋಗ್ರಾಫರ್ ಅಸೋಸಿಯೇಶನ್ (ಉಪ್ಪಾ) ನೇತೃತ್ವದಲ್ಲಿ ಪರ್ಯಾಯ ಕಾಣಿಯೂರು ಶ್ರೀಕೃಷ್ಣ ಮಠ ಪ್ರಾಯೋಜಕತ್ವದಲ್ಲಿ “ಉಪ್ಪಾಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ’ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಿದೆ.
ಯಾವುದೇ ಶುಲ್ಕ ಇಲ್ಲ. ಒಬ್ಬರು ಗರಿಷ್ಠ 4 ಚಿತ್ರಗಳನ್ನು ಕಳಿಸಬಹುದು. ಚಿತ್ರದ ಅಗಲ 1,800 ಪಿಕ್ಸೆಲ್ನಲ್ಲಿದ್ದು, ಗರಿಷ್ಠ 2 ಮೆಗಾ ಬೈಟ್ (ಎಂಬಿ) ಒಳಗಿರಬೇಕು. ಚಿತ್ರಗಳನ್ನು [email protected] ಗೆ ಸೆ. 20ರೊಳಗೆ ಕಳಿಸಬೇಕು.
ಆಯ್ಕೆಯಾದ ಚಿತ್ರಗಳಿಗೆ 5,555 ರೂ., 3,333 ರೂ., 2,222 ರೂ. ನಗದು, 5 ಸಮಾಧಾನಕರ ಬಹುಮಾನ, ಸ್ಮರಣಿಕೆ ನೀಡಲಾಗುವುದು. ಚಿತ್ರಗಳು ಉಡುಪಿಯ ಈ ಬಾರಿಯ ಜನ್ಮಾಷ್ಟಮಿ – ವಿಟ್ಲಪಿಂಡಿ ಮಹೋತ್ಸವಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿರಬೇಕು ಎಂದು ಉಪ್ಪಾ ಅಧ್ಯಕ್ಷ ಜನಾರ್ದನ ಕೊಡವೂರು ತಿಳಿಸಿದ್ದಾರೆ.