ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬಸ್ರೂರು: ಇಲ್ಲಿನ ಕಾಶೀ ಮಠದದಲ್ಲಿರುವ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನದಲ್ಲಿ ಗುರುವರ್ಯರ ೧೩೦ನೇ ಪುಣ್ಯತಿಥಿಯ ಅಂಗವಾಗಿ ಗುರು ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ಜರಗಿತು. ಪೂವಾಹ್ನ ಸಾನಿದ್ಯ ಹವನ, ಶತಕಲಶಾಭಿಷೇಕ, ೧೦೮ ಎಳನೀರಿನ ಅಭಿಷೇಕ, ಪವಮಾನ ಅಭಿಷೇಕ, ಲಘು ವಿಷ್ಣು ಹವನ ಹಾಗೂ ಮಧ್ಯಾಹ್ನ ಮಹಾಪೂಜೆ, ಮಹಾ ಅನ್ನ ಸಂತರ್ಪಣೆ ಊರ ಪರವೂರ ಭಕ್ತ ಹಾಗೂ ಶಿಷ್ಯ ವೃಂದದವರ ಭಾಗವಹಿಸುವಿಕೆಯಿಂದ ನಡೆಯಿತು.

Call us

Call us

ಈ ಕಾರ್ಯಕ್ರಮದಲ್ಲಿ ಚೇಂಪಿ,ಸಾಲಿಗ್ರಾಮ,ಕೋಟ ಭಜನಾ ಮಂಡಳಿಗಳಿಂದ ವಿಶೇಷ ಭಜನಾ ಕಾರ್ಯಕ್ರಮ ಜರಗಿತು. ರಾತ್ರಿ ನಗರೋತ್ಸವ, ಅಷ್ಟಾವಧಾನ ಸೇವೆ ಹಾಗೂ ಗುರು ಗುಣಗಾನ ಕಾರ್ಯಕ್ರಮ ನೇರವೇರಿತು. ಮಠದ ವ್ಯವಸ್ಥಾಪಕ ಸಮಿತಿ ಮುಖ್ಯಸ್ಥರಾದ ಶ್ರೀಧರ ಕಾಮತ್, ದಿನೇಶ ಕಾಮತ್, ದಿನಕರ ಶೆಣೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಂಗನಾಥ ಪಡಿಯಾರ್, ರಾಮಚಂದ್ರ ಪಡಿಯಾರ್, ಗಣೇಶ ಕಾಮತ್ ನೇತೃತ್ವದಲ್ಲಿ ಹೂವಿನ ಹಾಗೂ ವಿದ್ಯುದೀಪಾಲಂಕಾರ ಶೃಂಗಾರಗೊಂಡು ಪಲ್ಲಕಿಯಲ್ಲಿ ಶ್ರೀ ಗುರುವರ್ಯರ ಭಾವಚಿತ್ರ ಹಾಗೂ ದೇವರ ಮೂರ್ತಿಯನ್ನು ಕೊಂಡೊಯ್ದು ನಗರೋತ್ಸವ ನೇರವೇರಿತು. ವೇ.ಮೂ. ಪಾಂಡುರಂಗ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *

2 + 6 =