ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸುದ್ದಿ ಕಿರಣ ಟಿವಿ ವಾಹಿನಿಯಿಂದ ಕೊಡಮಾಡುವ ‘ಭಾರತ ಸೇವಾ ರತ್ನ ಪ್ರಶಸ್ತಿ’ಗೆ ಚಂದ್ರಶೇಖರ ಬಸ್ರೂರು ಭಾಜನರಾಗಿದ್ದಾರೆ. ಇತ್ತಿಚಿಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ರಂಗಭೂಮಿ ಹಾಗೂ ಹಿರಿತೆರೆಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರಶೇಖರ ಅವರು ನಾಟಕ ರಚನೆ ಹಾಗೂ ನಿದೇ೯ಶಕರು, ಸಿನಿಮಾ ನಟನೆ, ನಿಮಾ೯ಣ ಹಾಗೂ ಸಾವ೯ಜನಿಕ ಹೋರಾಟಗಳಲ್ಲಿ ತೊಡಗಿಕೊಂಡಿದ್ದಾರೆ.