ಶ್ರೀ ಬಗಳಾಂಬ ತಾಯಿ ಪ್ರತಿಷ್ಠಾ ವರ್ಧಂತಿ, ಚಂಡಿಕಾಯಾಗ ಸಂಪನ್ನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಬಗಳಾಂಬ ತಾಯಿ ದೇವಸ್ಥಾನದ ೧೫ನೇ ವರ್ಷದ ಪ್ರತಿಷ್ಠಾ ವರ್ಧಂತಿಮಹೋತ್ಸವ, ಚಂಡಿಕಾಯಾಗ ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು.

Call us

Call us

ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳವರ ಅನುಗ್ರಹದೊಂದಿಗೆ ವೇದಮೂರ್ತಿ ಕೆ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಗಣಯಾಗ, ಸತ್ಯನಾರಾಯಣ ಪೂಜೆ, ಗುರು ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ, ಪರಿವಾರ ದೇವರಿಗೆ ಕಲಶಾಭಿಷೇಕ, ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಅಧಿವಾಸ ಹೋಮ ಫೆ.೦೬ರಂದು ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ, ಚಂಡಿಕಾಯಾಗ ಪೂರ್ಣಾಹುತಿ, ಮಹಾಪೂಜೆ, ಅನ್ನ ಸಂತರ್ಪಣೆ ಸಾಂಗವಾಗಿ ನಡೆಯಿತು. ಪ್ರತಿಷ್ಠಾ ವರ್ಧಂತಿಮಹೋತ್ಸವದ ಅಂಗವಾಗಿ ಶ್ರೀ ದೇವಿಗೆ ವಿಶೇಷ ಪೂಜೆ, ಪುಷ್ಪಲಂಕಾರ ಸೇವೆಗಳು ನೆರವೇರಿತು. ಸಾವಿರಾರು ಭಕ್ತರು ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಪ್ರದಾನ ಅರ್ಚಕ ಗಣಪತಿ ಸುವರ್ಣ, ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕೆ.ಬಿ., ಗೌರವಾಧ್ಯಕ್ಷರಾದ ಸೀತಾರಾಮ ಹೇರಿಕುದ್ರು, ಕಾರ್ಯದರ್ಶಿ ರಮೇಶ್ ಮಕ್ಕಿ, ಜಲಜ ಗಣಪತಿ, ಅಣ್ಣಯ್ಯ ಕೋಡಿ, ಗಣೇಶ್ ಮೆಂಡನ್, ಕರುಣಾಕರ, ರತ್ನಾಕರ ಗಾಣಿಗ, ಜನಾರ್ಧನ, ಸಂತೋಷ ಕೋಟೇಶ್ವರ, ಸುಶೀಲ ಮರವಂತೆ, ರತ್ಮಮ್ಮ ಕೋಟೇಶ್ವರ, ಪೂರ್ಣಿಮಾ ಕೋಟೇಶ್ವರ, ವಿನಯ ಹೇರಿಕುದ್ರು, ವೀಣಾ ಪ್ರಕಾಶ್, ಉದಯಕುಮಾರ್, ನಾಗರಾಜ್, ರಶ್ಮಿರಾಜ್, ಪ್ರಜ್ವಲ್, ಸುಧೀರ್ ಕುಂದರ್, ಸುಧೀರ್ ಕೃಷ್ಣ, ಶ್ರೀಧರ ಸುವರ್ಣ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

twelve − four =