ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು: ಸಾಂಸ್ಕೃತಿಕ ಸಂಘಗಳ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲೆಗಳು ಬದುಕಿಗೆ ದಾರಿತೋರಿಸುವ ಜತೆಗೆ ಭಾವನಾತ್ಮಕ ಜೀವನದ ಮೌಲ್ಯಗಳು ಬೆಳೆಯಲು ಸಹಕಾರಿಸುತ್ತದೆ. ಆಧುನಿಕ ಯುಗದಲ್ಲಿ ಬೇರೆ ಬೇರೆ ಮಾಧ್ಯಮಗಳ ಮೂಲಕ ಯುವಜನತೆ ದಾರಿ ತಪ್ಪುವ ಅವಕಾಶಗಳೇ ವಿಸ್ತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾದ ಚೌಕಟ್ಟು ಒಂದು ಉತ್ತಮ ವ್ಯಕ್ತಿತ್ವ ರೂಪುಗಳ್ಳುವಂತೆ ಮಾಡುತ್ತವೆ ಎಂದು ನಿವೃತ್ತ ಅಧ್ಯಾಪಕ ಹಾಗೂ ಆಕಾಶವಾಣಿ ಕಲಾವಿದ ಹ್ಯಾರಾಡಿ ಚಂದ್ರಶೇಖರ ಕೆದ್ಲಾಯ ಹೇಳಿದರು.

Call us

Call us

Call us

ಇಲ್ಲಿನ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಬುಧವಾರ ನಡೆದ ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜಿನ ೨೦೧೬-೧೭ನೇ ಶೈಕ್ಷಣಿಕ ಸಾಲಿನ ಎನ್‌ಎಸ್‌ಎಸ್, ಯಕ್ಷಗಾನ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಕಲೆಗಳಲ್ಲಿ ಅದರದ್ದೇ ಆದ ಒಂದೊಂದು ಸಂದೇಶ ಅಡಗಿದೆ. ಇವುಗಳು ನೆಲೆ ಕಂಡುಕೊಳ್ಳಬೇಕಾದರೇ ಅವುಗಳ ಬಗೆಗಿನ ಅರಿವು ಅಗತ್ಯ. ನಮ್ಮ ಆಸಕ್ತಿಗಳೇ ಇದರ ಸಿರಿವಂತಿಗೆಗೆ ಸಹಕಾರಿಯಾಗುತ್ತದೆ. ಬಾಲ್ಯದಲ್ಲಿಯೇ ಇದರಲ್ಲಿ ಅಭಿರುಚಿ ಬೆಳೆಸಿಕೊಂಡಾಗ ನಮ್ಮಲ್ಲಿನ ಆಸಕ್ತಿ ಹೆಚ್ಚಾಗಿ ಪರಸ್ಪರ ಸಹಕಾರದಿಂದ ನಮ್ಮ ಮೌಲ್ಯವೂ ವೃದ್ಧಿಸುತ್ತದೆ. ಎಲ್ಲರೂ ನಮ್ಮವಾಗಿಬಿಡುವ, ಎಲ್ಲವನ್ನೂ ಹಂಚಿಕೊಳ್ಳುವ ಕ್ರಿಯೆ ಮಹತ್ವವೆನಿಸುತ್ತದೆ. ಈ ದಿಸೆಯಲ್ಲಿ ಸಾಂಸ್ಕೃತಿಕ ಕ್ರಿಯೆ ಹೆಚ್ಚುಚ್ಚು ನಡೆಯಬೇಕಾಗಿರುವುದು ಅಗತ್ಯತೆಯಿದೆ ಎಂದರು.

Call us

Call us

ಕಾಲೇಜಿನ ಪ್ರಾಂಶುಪಾಲ ಎಸ್. ಅರುಣ್ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಡಾ. ನಿಟ್ಟೂರು ಶಾಂತರಾಮ ಪ್ರಭು ಕಾಲೇಜಿನ ಯಕ್ಷಗಾನ ಸಂಘವನ್ನು ಉದ್ಘಾಟಿಸಿದರು. ತಾಪಂ ಸದಸ್ಯೆ ಗ್ರೀಷ್ಮಾ ಭಿಡೆ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಡಗುತಿಟ್ಟು ಯಕ್ಷಗಾನದ ಸಾಂಪ್ರದಾಯಿಕ ಶೈಲಿಯ ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ಷೇತ್ರ ಪುರೋಹಿತ ನರಸಿಂಹ ಭಟ್ ಉಪಸ್ಥಿರಿದ್ದರು.

ಎನ್‌ಎಸ್‌ಎಸ್ ಘಟಕಾಧಿಕಾರಿ ಗೋಪಾಲಕೃಷ್ಣ ಜಿ. ಬಿ. ಸ್ವಾಗತಿಸಿ, ಪ್ರಾಸ್ತಾವಿಸಿದರು. ವಿದ್ಯಾಥಿಗಳಾದ ಸುಪ್ರೀಯಾ ವಂದಿಸಿದರು. ಮಹೇಶ ಕೊಠಾರಿ ಮತ್ತು ರಾಧಿಕಾ ನಿರೂಪಿಸಿದರು. ಮಧ್ಯಾಹ್ನ ವಿವಿಧ ಕ್ಷೇತ್ರದ ಆಯ್ದ ಕಲಾವಿದರು ಮತ್ತು ಕಾಲೇಜಿನ ವಿದ್ಯಾರ್ಥಿಗಳಿಂದ ಯಕ್ಷ-ಭಾವ-ಗಾನ-ಹಾಸ್ಯ-ಲಾಸ್ಯ ಎನ್ನುವ ವಿನೂತನ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

nine − nine =