ಶ್ರೀ ರಾಮಕೃಷ್ಣ ಕುಟೀರದಲ್ಲಿ ನವರಾತ್ರಿ ಸಂಭ್ರಮ: ಧಾರ್ಮಿಕ ಕಾರ್ಯಕ್ರಮ, ಕುಮಾರಿ ದುರ್ಗಾ ಪೂಜೆ ಸಂಪನ್ನ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

Call us

Call us

ಆಶ್ರಮದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪ್ರತಿನಿತ್ಯ ಆಶ್ರಮದ ವಿದ್ಯಾರ್ಥಿಗಳಿಂದ ನಿತ್ಯೋಪಾಸನ ಮಂತ್ರಗಳೊಂದಿಗೆ ಗಣಪತ್ಯಧರ್ಮಶೀರ್ಷ, ದೇವಿಯ ವಿವಿಧ ಸ್ತುತಿಗಳು, ಲಲಿತ ಸಹಸ್ರನಾಮ, ಸಪ್ತಶತಿ ಪರಾಯಣ, ಉಪನಿಷತ್ ಪಠಣ, ದೇವಿ ಪಾರಾಯಣ, ಭಗವದ್ಗೀತೆ, ವಿಷ್ಣು ಸಹಸ್ರನಾಮ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲಿಸ್ ಇತ್ಯಾದಿ ಸ್ತೋತ್ರಗಳ ಪಠಣ ನಡೆಯಿತು.

ದುರ್ಗಾಷ್ಟಮಿಯಂದು ವಿಶೇಷವಾಗಿ ಕುಮಾರಿ ದುರ್ಗಾ ಪೂಜೆ ನಡೆಯಿತು. ಮಾತೆಯರಾದ ಯಶೋಧಾ ಅಡಿಗ ವಂಡ್ಸೆ ಹಾಗೂ ನಾಗಶ್ರೀ ಮಧ್ಯಸ್ಥ ಕೋಟ ಕುಮಾರಿ ದುರ್ಗಾ ಪೂಜೆ ನೆರವೇರಿಸಿದರು. ಮಹಾನವಮಿಯಂದು ವಿದ್ಯಾರ್ಥಿಗಳಿಂದ ಚಂಡಿಕಾ ಪಾರಾಯಣದ ದೇವಿ ಸ್ತುತಿಗಳ ಸಾಮೂಹಿಕ ಪಠಣ, ವಿಜಯದಶಮಿಯಂದು ವಿದ್ಯಾ ಪ್ರಧಾನ, ದೆವಿ ಮಹಾತ್ಮೆಯ ಕಥನ ಪಠಣ ಜರುಗಿದವು.

Leave a Reply

Your email address will not be published. Required fields are marked *

14 + three =