ಶ್ರೇಷ್ಠ ಗುರುವಿನಿಂದ ಶ್ರೇಷ್ಠ ಶಿಷ್ಯಂದಿರ ನಿರ್ಮಾಣ ಸಾಧ್ಯ: ಅಶೋಕ್ ಕಾಮತ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ| ಎಸ್. ರಾಧಾಕೃಷ್ಣನ್, ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿಯವರು ಶಿಕ್ಷಕರಾಗಿದ್ದುಕೊಂಡು ಕಾರ‍್ಯಕ್ಷಮತೆ, ಬದ್ಧತೆಯಿಂದ ದೇಶದ ಅತ್ಯುನ್ನತ ಹುದ್ದೆಗೇರಿರುವುದು ಶಿಕ್ಷಕರಾದ ನಮಗೆ ಹೆಮ್ಮೆ. ಅವರಂತೆಯೇ ಪ್ರತಿಯೊಬ್ಬ ಶಿಕ್ಷಕನೂ ಸಹ ಈ ಕೊರೊನಾದಂತಹ ಸಂಕಷ್ಟ ಸಮಯದಲ್ಲಿಯೂ ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಳುವುದು ಇಂದಿನ ಅವಶ್ಯಕ ಎಂದು ಕುಂದಾಪುರದ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ, ಪ್ರಸ್ತುತ ಡಯಟ್ ಉಪ ಪ್ರಾಂಶುಪಾಲಾಗಿರುವ ಅಶೋಕ್ ಕಾಮತ್ ಹೇಳಿದರು.

Call us

ಅವರು ಕುಂದಾಪುರದ ಸರಕಾರಿ ಪ.ಪೂ. ಕಾಲೇಜಿನ (ಬೋರ್ಡ್ ಹೈಸ್ಕೂಲು) ಶ್ರೀ ಲಕ್ಷ್ಮಿ ನರಸಿಂಹ ಸಭಾಭನದಲ್ಲಿ ಉಡುಪಿ ಜಿ.ಪಂ., ಕುಂದಾಪುರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

ರಾಧಾಕೃಷ್ಣನ್ ಅವರಲ್ಲಿರುವ ಮಾನವೀಯ ಗುಣಗಳಿಂದ ಎಲ್ಲರನ್ನು ಆಕರ್ಷಿಸುತ್ತಿದ್ದರು. ಅಂತಹ ಸದ್ಗುಣಗಳನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಢಿಸಿಕೊಳ್ಳಬೇಕು. ಈ ಸಮಯ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುವುದು ಸಹ ಅತ್ಯವಶ್ಯಕ. ಒಬ್ಬ ಶ್ರೇಷ್ಠ ಗುರುವಿನಿಂದ ಶ್ರೇಷ್ಠ ಶಿಷ್ಯಂದಿರ ನಿರ್ಮಾಣ ಸಾಧ್ಯ. ಅದರಿಂದ ಉತ್ತಮ ಸಮಾಜವು ನಿರ್ಮಾಣಗೊಳ್ಳುತ್ತದೇ ಇದೆ. ನಮ್ಮ ಮಹತ್ತರ ಕೊಡುಗೆ ಎಂದ ಅವರು, ದಿನಾಚರಣೆಯು ನಮಗೆ ಪ್ರೇರಣೆ, ಪ್ರೋತ್ಸಾಹದ ಜತೆಗೆ ಮತ್ತಷ್ಟು ಸಕ್ರೀಯರಾಗಿ ಕೆಲಸ ಮಾಡಲು ಹುರುಪು ನೀಡಲಿದೆ.

ಕುಂದಾಪುರ ತಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ ಹರ್ಕೂರು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಅ‘ಕ್ಷ, ತಾ.ಪಂ. ಕಾರ‍್ಯನಿರ್ವಹಣಾಽಕಾರಿ ಕೇಶವ ಶೆಟ್ಟಿಗಾರ್ ಹಾಗೂ ಎಲ್ಲ ಶಿಕ್ಷಕರ ಸಂಘಗಳ ಅ‘ಕ್ಷರು ಉಪಸ್ಥಿತರಿದ್ದರು.

Call us

ಈ ಸಂದರ್ಭದಲ್ಲಿ ಸೇವೆಯಲ್ಲಿದ್ದಾಗಲೇ ಸಾವನ್ನಪ್ಪಿದ ಸಿದ್ದಾಪುರ ಸಿಆರ್‌ಪಿ ಸತೀಶ್ ಬಳೆಗಾರ್ ಹಾಗೂ ಬಿದ್ಕಲ್‌ಕಟ್ಟೆ ಶಾಲೆಯ ಶಿಕ್ಷಕ ಶಿವ ಪುತ್ರನ್ ಖಾನಾಪುರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕುಂದಾಪುರದ ಕ್ಷೇತ್ರ ಶಿಕ್ಷಣಾಽಕಾರಿ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕರಾದ ತೆಕ್ಕಟ್ಟೆಯ ವೇಣುಗೋಪಾಲ ಹೆಗ್ಡೆ ಹಾಗೂ ಶಂಕರನಾರಾಯಣದ ಸಂತೋಷ್ ಕುಮಾರ್ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿದರು.

ಸಾಧಕ – ನಿವೃತ್ತ ಶಿಕ್ಷಕರಿಗೆ ಸಮ್ಮಾನ
ಈ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತಿಯಾದ ಶಿಕ್ಷಕರಾದ ಪ್ರಾಥಮಿಕ ಶಾಲೆಯ ಹೆರಿಯಣ್ಣ ಶೆಟ್ಟಿ ಅಂಪಾರು ಮೂರುಕೈ, ಸುಕನ್ಯಾ ಯಡಾಡಿ- ಮತ್ಯಾಡಿ, ಪ್ರೇಮಾ ಶೆಡ್ತಿ ತೊಂಬಟ್ಟು, ವಿಶಾಲಾಕ್ಷಿ ಬಸ್ರೂರು, ವಾಸುದೇವ ಎಂ.ಕೆ. ನೂಜಿ, ರಮಣಿ ಬಿದ್ಕಲ್‌ಕಟ್ಟೆ, ರೇಹನಾ ಬೇಗಂ ಕೋಡಿ, ಸೂರಪ್ಪ ಹೆಗ್ಡೆ ಹುಣ್ಸೆಮಕ್ಕಿ, ರಾಧಾಕೃಷ್ಣ ಕವರಿ ಹೊಳೆಬಾಗಿಲು, ನರಸಿಂಹ ಸಮಗಾರ ಸಿದ್ದಾಪುರ, ಸುರೇಂದ್ರ ಶೆಟ್ಟಿ ಮರಾತೂರು, ಗೋಪಾಲ ನಾಯ್ಕ್ ಬೆಳ್ವೆ, ಪ್ರತಾಪ್ ಶೆಟ್ಟಿ ಐರೇಬಲು, ಶ್ಯಾಮಲಾ ವಡೇರಹೋಬಳಿ, ಬೇಬಿ ಕೊರ್ಗಿ, ಸುಜಾತ ಕುಮಾರಿ ಗಂಗೊಳ್ಳಿ, ಸೀತಾಲಕ್ಷ್ಮಿ ತೆಕ್ಕಟ್ಟೆ, ಗೀತಾ ಬಾಯಿ ಶಂಕರನಾರಾಯಣ, ಅನುದಾನಿತ ಶಾಲೆಯ ವಿಶ್ವನಾಥ ಶೆಟ್ಟಿ, ಚೋನಾಳಿ, ಕಿರಣ್ ಹೊಂಬಾಡಿ- ಮಂಡಾಡಿ, ಲತಾ ಭಟ್ ಕುಂದಾಪುರ, ಯಶೋದಾ ಶೆಟ್ಟಿ ಹಳ್ನಾಡು, ನಾರಾಯಣ ಉಪಾಧ್ಯ ಗಂಗೊಳ್ಳಿ, ಸುಧಾಕರ ಶೆಟ್ಟಿ ಹೊಂಬಾಡಿ- ಮಂಡಾಡಿ, ಸರಕಾರಿ ಪ್ರೌಢಶಾಲೆಯ ಶ್ಯಾಮ್ ಶಾನುಭಾಗ್ ಕುಂದಾಪುರ, ಮೀರಾ ಸಾಹೇಬ್ ವಡೇರಹೋಬಳಿ, ರಾಜಕುಮಾರ ತೆಕ್ಕಟ್ಟೆ, ಕುಸ್ಲು ಗೌಡ್ರು ಬೇಳೂರು, ಸೌಭಾಗ್ಯ ಸಿದ್ದಾಪುರ, ಅನುದಾನಿತ ಪ್ರೌಢಶಾಲೆಯ ಬಾಲಕೃಷ್ಣ ಶೆಟ್ಟಿ ಅಂಪಾರು, ವಿನಯ ಕುಮಾರಿ ಅಂಪಾರು, ಕಳೆದ ಬಾರಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ ಚಂದ್ರಶೇಖರ್ ಶೆಟ್ಟಿ ಸೌಡ, ಶೇಖರ ಯು. ಅಮಾಸೆಬಲು, ಶ್ರೀಕಾಂತ್ ಬಸ್ರೂರು ಅವರನ್ನು ಸಮ್ಮಾನಿಸಲಾಯಿತು.

 

Leave a Reply

Your email address will not be published. Required fields are marked *

15 + eight =