ಸಂಗಾತಿ ಜೊತೆಗಿನ ಅನುಬಂಧ ಚಿರಕಾಲ ಉಳಿಯಲು ಹೀಗೆ ಮಾಡಿ!

Call us

Call us

ಸಕಲ ಜೀವ ರಾಶಿಗಳಲ್ಲಿ ಮನುಷ್ಯನ ಜನ್ಮ ಶೇಷ್ಠವಾದದ್ದು, ಮನುಷ್ಯನ ಜೀವನದಲ್ಲಿ ಸಂಬಂಧಗಳು ಬೆಸೆದುಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಗಂಡು ಹೆಣ್ಣಿನ ನಡುವಿನ ಪ್ರೀತಿ-ದಾಂಪತ್ಯ ಎಂಬ ಸಂಬಂಧ ಬಹಳ ಸೂಕ್ಷ್ಮವಾಗಿರುವಂತದ್ದು. ಕೊನೆತನಕ ಮನಷ್ಯನ ಜೀವನದಲ್ಲಿ ಇರುವ ಸಂಬಂಧವೆಂದರೆ ಸಂಗಾತಿ ಸಂಬಂಧ ಜೀವನದ ಪ್ರಯಣದಲ್ಲಿ ಎಳುಬೀಳುಗಳಲ್ಲಿ ಜೊತೆಯಾಗಿ ನಿಲ್ಲುವುದೇ ಸಂಗಾತಿಯ ಸಂಬಂಧ

Call us

Call us

Call us

ಕೇವಲ ಕುಟುಂಬದ ಕಡೆಯಿಂದಷ್ಟೆ ಅಲ್ಲ, ಪ್ರೇಮಿಗಳ ನಡುವಿನ ಭಿನ್ನಾಭಿಪ್ರಾಯಗಳು ಸಹ ಸಂಬಂಧ ಮುರಿದು ಹೋಗುವವರೆಗೂ ಮುಂದುವರೆಯಬಹುದು. ಸಮಯ ಸಾಗಿದಂತೆ ಸಂಬಂಧಗಳಿಗೆ ನೀಡುವ ಪ್ರಾಮುಖ್ಯತೆಯು ಬೇರೊಂದು ಸಂಬಂಧಕ್ಕೆ ಬದಲಾಗಬಹುದು. ಆದರೆ ಕೆಲವೊಂದು ಸಲ ಸಂಗಾತಿಯೊಂದಿಗಿನ ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯ ಕೊಡದೇ ಮುರಿದು ಹೋಗಬಹುದು. ಪರಸ್ಪರ ಪ್ರೀತಿ, ಗೌರವ ನಂಬಿಕೆ ಇವೇ ಸಂಗಾತಿಯೊಂದಿಗಿನ ಬಂಧ ಚಿರಕಾಲ ಉಳಿಯಲು ಸಹಾಯ ಮಾಡುತ್ತದೆ.

Call us

Call us

ಮನಸ್ಸು ಬಿಚ್ಚಿ ಮಾತನಾಡಿ:
ಹೌದು, ನೀವು ನಿಮ್ಮ ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿದರೆ ನಿಮ್ಮ ಸಂಬಂಧ ಮುರಿದು ಬಿಳುವ ಸಾಧ್ಯತೆಗಳೇ ಇರುವುದಿಲ್ಲ ಯಾಕೆಂದರೆ ಇಂದಿನ ದಿನಗಳಲ್ಲಿ ಮೊಬೈಲ್ ಕೈಯಲ್ಲಿ ಹಿಡಿದುಕೊಂಡರೆ ನಮಗೆ ಸುತ್ತಲಿನ ಜಗತ್ತಿನ ಅರಿವೇ ಇಲ್ಲದಂತೆ ಇರುತ್ತಾರೆ. ಸಂಬಂಧದ ಮೇಲೂ ಮೊಬೈಲ್ ಎನ್ನುವುದು ಗಾಢ ಪರಿಣಾಮ ಬೀರುತ್ತದೆ. ಹೀಗಾಗಿ ನೀವು ಸಂಗಾತಿ ಜತೆಗೆ ಇರುವ ವೇಳೆ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಆಕೆಯೊಂದಿಗೆ ಕಾಲ ಕಳೆಯಬೇಕು. ಅಂದರೆ ಸಂಗಾತಿಗೆ ನೀವು ದಿನದಲ್ಲಿ ಒಂದಿಷ್ಟು ಸಮಯ ನೀಡಬೇಕು. ಇಲ್ಲವಾದಲ್ಲಿ ನಿಮ್ಮ ಸಂಬಂಧದ ಮೇಲಿನ ನಂಬಿಕೆಯನ್ನು ನಿಮ್ಮ ಸಂಗಾತಿ ಕಳೆದುಕೊಳ್ಳಬಹುದು. ಕೇವಲ ಒಂದು ಜೀವಿವಿಲ್ಲದ ವಸ್ತು ನಿಮ್ಮ ಅಮೂಲ್ಯ ಸಂಬಂಧ ಕೆಡಿಸುತ್ತದೆ ಅಂದ್ರೆ ಅದು ನಿಮ್ಮದೇ ತಪ್ಪು.

ಸದಾ ಕೇಳುಗರಾಗಿ:
ಸಂಬಂಧದಲ್ಲಿ ಸಂವಹನ ಎಷ್ಟು ಮುಖ್ಯವೋ, ಅದೇ ರೀತಿಯಾಗಿ ಸಂಗಾತಿಯು ಮಾತನಾಡುವ ವೇಳೆ ಕೇಳುಗರಾಗಿರುವುದು ಕೂಡ ಅಷ್ಟೇ ಮುಖ್ಯ. ನೀವು ಸಂಗಾತಿಯ ಮಾತುಗಳನ್ನು ಸರಿಯಾಗಿ ಆಲಿಸಿದರೆ ಆಗ ಅವರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುವುದು ಮತ್ತು ನಿಮ್ಮೊಂದಿಗೆ ಅವರು ಮತ್ತಷ್ಟು ಗಾಢವಾಗಿ ಬೆಸೆದುಕೊಳ್ಳುವರು. ನೀವು ಅವರ ಮಾತುಗಳನ್ನು ಕೇಳಲು ತಯಾರಿರದೇ ಹೋದಾಗ ಆಕೆಗೆ ನೋವಾಗಿ ಎಲ್ಲವೂ ಅವಳಲ್ಲೇ ಹುದುಗಿಕೊಂಡು ಮತ್ತಷ್ಟು ನೋವು ತಿನ್ನುತ್ತಾಳೆ. ಇದಕ್ಕೆ ಕಾರಣ ನೀವಾಗಿರುತ್ತೀರಿ.

ಉಡುಗೊರೆ ನೀಡಿ:
ಸರ್ಪೈಸ್ ಉಡುಗೊರೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ?, ಎಲ್ಲರಿಗೂ ಇಷ್ಟ. ಇನ್ನು ನಿಮ್ಮ ಸಂಬಂಧವನ್ನು ಇನ್ನಷ್ಟು ಸುಂದರವಾಗಿಸಬೇಕಾದರೆ ಕೆಲವೊಂದು ಸಲ ಸಂಗಾತಿಗೆ ಸರ್ಪೈಸ್ ಉಡುಗೊರೆಗಳನ್ನು ತಂದುಕೊಡಿ. ಇದರಿಂದ ನೀವು ಅವರಿಗೆ ಅಚ್ಚರಿ ಮೂಡಿಸುವ ಜತೆಗೆ ಅವರ ಬಗ್ಗೆ ಕಾಳಜಿ ಕೂಡ ಇಟ್ಟಿದ್ದೀರಿ ಎನ್ನುವ ಭಾವನೆ ಮೂಡುವುದು. ಸಂಗಾತಿಗೆ ಇಷ್ಟವಾಗುವಂತಹ ಯಾವುದೇ ಕೆಲಸವನ್ನಾದರೂ ನೀವು ಮಾಡಿ, ನಿಮ್ಮ ಸಂಗಾತಿಯನ್ನು ಖುಷಿಯಾಗಿಡಿ.

ಪರಸ್ಪರರಿಗೆ ಸಮಯ ಮೀಸಲಿಡಿ
ಇದು ಅತಿ ಮುಖ್ಯ, ಯಾಕಂದ್ರೆ ನಿಮ್ಮ ಸಂಗಾತಿಗೆ ನಿಮ್ಮ ಇರುವಿಕೆಯನ್ನು ಸಾಬೀತು ಪಡಿಸಬೇಕು. ಮದುವೆಯಾದ ಆರಂಭದಲ್ಲಿ ನೀವಿಬ್ಬರು ಜತೆಯಾಗಿ ಹೆಚ್ಚು ಸಮಯ ಕಳೆದಿರಬಹುದು. ಆದರೆ ಮದುವೆ ಬಳಿಕ ನಿಮಗೆ ಇಂತಹ ಅವಕಾಶ ಸಿಗದೆ ಇರಬಹುದು. ಇದಕ್ಕಾಗಿ ನೀವು ಎಷ್ಟೇ ವ್ಯಸ್ತರಾಗಿದ್ದರೂ ಪರಸ್ಪರ ಜತೆಯಾಗಿ ಕಳೆಯಲು ಸಮಯ ಮೀಸಲಿಡಿ. ಕೆಲವೊಮ್ಮೆ ನಾವು ವೃತ್ತಿ ಮಧ್ಯೆ ಸಮಯ ಹೊಂದಿಸಲು ಕಷ್ಟಪಡುತ್ತಿದ್ದರೂ ವೃತ್ತಿಗಿಂತಲೂ ಮಿಗಿಲಾಗಿರುವ ಸಂಬಂಧಕ್ಕೆ ನಿರ್ದಿಷ್ಟವಾದ ಸಮಯ ಮೀಸಲಿಡಿ.

ಆಗಾಗ ಹೊರಗಡೆ ಸಮಯ ಕೆಳೆಯಿರಿ
ನಿಮ್ಮ ಮಾಮೂಲಿ ಮನೆ ಹಾಗೂ ಕಚೇರಿಯ ನಡುವೆ ಜೀವನವು ತುಂಬಾ ಬೇಸರ ಮೂಡಿಸುವುದು ಸಹಜ. ಇಂತಹ ಸಮಯದಲ್ಲಿ ಸಂಗಾತಿಗಳು ಹೊರಗಡೆ ಸುತ್ತಾಡಲು ಹೋದರೆ ಆಗ ಖಂಡಿತವಾಗಿಯೂ ಪ್ರೀತಿ ಹಾಗೂ ಭಾಂದವ್ಯವು ಮತ್ತಷ್ಟು ಬೆಸೆಯುವುದು. ಯಾವುದೇ ಪ್ರವಾಸಕ್ಕೆ ಹೋಗುವುದಿದ್ದರೂ ಅದು ನಿಮಗಿಬ್ಬರಿಗೆ ಖುಷಿ ನೀಡುವಂತಿರಲಿ. ನಿಮ್ಮ ಸಂಗಾತಿಗೆ ಇಷ್ಟವಾದ ಜಾಗವನ್ನು ಅರಿತು ಅಲ್ಲಿಗೆ ಕರೆದುಕೊಂಡು ಹೋದರೆ ಉತ್ತಮ.

ವಿಶೇಷ ದಿನಗಳನ್ನು ನೆನಪಿಡಿ:
ಸಾಮಾನ್ಯವಾಗಿ ಹುಡುಗರು ತಮ್ಮ ಮದುವೆಯಾದ ದಿನ, ಪತ್ನಿಯ ಹುಟ್ಟಿದ ಹಬ್ಬದ ದಿನಾಂಕ ಇಂತಹ ಪ್ರಮುಖ ದಿನಗಳನ್ನೇ ಮರೆತುಬಿಡುವರು. ಆದರೆ ಇದು ಒಳ್ಳೆಯದಲ್ಲ. ನೀವು ವಿಶೇಷವಾಗಿ ಭೇಟಿ ಮಾಡಿದ ದಿನ ಇತ್ಯಾದಿ ದಿನಾಂಕಗಳನ್ನು ನೆನಪಿಟ್ಟುಕೊಂಡು ಅದನ್ನು ಸಂಗಾತಿಗೆ ಹೇಳಿದರೆ ಆಗ ಖಂಡಿತವಾಗಿಯೂ ನಿಮ್ಮಲ್ಲಿನ ಅನ್ಯೋನ್ಯತೆ ಹೆಚ್ಚಾಗುವುದು. ಯಾಕಂದ್ರೆ ಹೆಣ್ಣು ಇಂತಹ ಚಿಕ್ಕಚಿಕ್ಕ ವಿಚಾರಗಳನ್ನೇ ಅತೀ ಹೆಚ್ಚು ನಿರೀಕ್ಷೆ ಮಾಡುವುದು, ಇದೇ ಆಕೆಗೆ ಖುಷಿ ನೀಡುವುದು.

ಆಸಕ್ತಿಗಳಿಗೆ ಪ್ರಾಮುಖ್ಯತೆ ನೀಡಿ:
ನಮ್ಮ ಹವ್ಯಾಸ ಹಾಗೂ ಅಭ್ಯಾಸಗಳಿಗೆ ಹೆಚ್ಚು ಒತ್ತು ನೀಡುವಂತೆ ಸಂಗಾತಿಯ ಆಸಕ್ತಿಗಳನ್ನು ಬೆಳೆಸಲು ಅವಕಾಶ ನೀಡಬೇಕು. ಅವರಿಗೆ ಯಾವುದಾದರೂ ವಿಚಾರದಲ್ಲಿ ಆಸಕ್ತಿಯಿದ್ದರೆ ಆಗ ನೀವು ಅವರನ್ನು ಪ್ರೋತ್ಸಾಹಿಸಿ ಮತ್ತು ಬೆಂಬಲವಾಗಿ ನಿಲ್ಲಿ. ಇದರಿಂದ ಅವರಿಗೆ ಸುರಕ್ಷಿತ ಭಾವನೆ ಬರುವುದು ಮಾತ್ರವಲ್ಲದೆ, ನಿಮ್ಮ ಮೇಲಿನ ಗೌರವವು ಹೆಚ್ಚಾಗುತ್ತದೆ.

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

3 × 1 =