ಸಂದೀಪನ್ ವಾರ್ಷಿಕೋತ್ಸವ: ಶಿಕ್ಷಣದಿಂದ ಪಡೆದ ಜ್ಞಾನ ಬದುಕಿನ ಆಸ್ತಿ – ಚಿತ್ರಾ ಕಾರಂತ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಮುದಾಯ ಮಾತ್ರ ಹೊರತು ಜಾತಿ ಸಮುದಾಯವಲ್ಲ. ಶಾಲಾ ಹಬ್ಬದ, ಉತ್ಸವಗಳ ಸವಿಯನ್ನು ಬಡವ-ಬಲ್ಲಿದ ಹಾಗೂ ಜಾತಿಭೇಧವಿಲ್ಲದೇ ಎಲ್ಲಾ ಮಕ್ಕಳು ಅನುಭವಿಸಿ ಸಂಭ್ರಮಿಸುವಂತಾಗಬೇಕು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಒಂದು ಕುಟುಂಬದ ಹಾಗೆ ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗಬೇಕು ಎಂದು ಸುಣ್ಣಾರಿ ಎಕ್ಸ್‌ಲೆಂಟ್ ಪದವಿ ಪೂರ್ವ ಕಾಲೇಜಿನ ಸಂಚಾಲಕಿ ಪಿ. ಚಿತ್ರಾ ಕಾರಂತ್ ಹೇಳಿದರು.

Call us

Call us

ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿದ್ಯಾ ಕೇಂದ್ರಗಳಲ್ಲಿ ಮಕ್ಕಳು ಪುಸ್ತಕದಿಂದ ಪಡೆದ ಜ್ಞಾನವನ್ನು ತಮ್ಮ ಮಸ್ತಕದಲ್ಲಿ ಸೇವಿಂಗ್ಸ್ ಮಾಡುವುದರಿಂದ ಮುಂದೆ ಯಾವುದೇ ರೀತಿಯಲ್ಲಿಯೂ ಖರ್ಚಾಗದ ಇದು ದೊಡ್ಡ ಅಸ್ತಿಯಾಗಿ ಅವರ ಜೀವನದುದ್ದಕ್ಕೂ ನಿಮಗೆ ಸಹಕಾರಿಯಾಗುತ್ತದೆ. ಶಿಕ್ಷಕರು ಕೂಡಾ ಪಾಠದ ಕುರಿತು ಪೂರ್ವ ತಯಾರಿಯಿಂದ ತರಗತಿಗೆ ಹೋಗಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ನಂತರ ಯಕ್ಷಗಾನ ಕಲಾವಿದ ಸಂಪಾಜೆಯ ಜಬ್ಬಾರ್ ಸಮೋ ಮಾತನಾಡಿ, ಕಲೆಯೆಂಬ ಮಾಧ್ಯಮದಿಂದ ಸಂಬಂಧಗಳನ್ನು Pಟ್ಟಿ ಬೆಸೆಯುವುದರ ಮೂಲಕ ಸಮಜದಲ್ಲಿ ಸಾಮರಸ್ಯ ಬೆಳೆಸುವುದಕ್ಕೆ ಸಾಧ್ಯ. ಸಮಾಜದ ನಡುವಿನ ಅಂತರ, ಅಸ್ಪರ್ಶತೆಗಳನ್ನು ಹೋಗಲಾಡಿಸಿ ಮನುಷ್ಯ-ಮನುಷ್ಯನ ನಡುವೆ ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆ ಹೆಚ್ಚಿಸಲು ಸಹಕಾರಿಯಾಗಬಲ್ಲದು ಎಂದರು, ಯಾವುದೇ ವಿಚಾರಗಳ ಬಗ್ಗೆ ತಿಳುವಳಿಕೆ ಹಾಗೂ ಸರಿಯಾದ ಮಾಹಿತಿಯಿಲ್ಲದೇ ಸಾರ್ವಜನಿಕವಾಗಿ ಚರ್ಚಿಸುವುದು ವದಂತಿಗಳನ್ನು ಹರಡುವುದರಿಂದ ಸಮಾಜದಲ್ಲಿ ಅಸಮತೋಲನ ಸೃಷ್ಠಿಯಾಗಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಬಹುದು. ಒಂದು ಅಸ್ಪಷ್ಟ ವದಂತಿಯಿಂದ ಸಾವು-ನೋವು ಜತೆಗೆ ಜನರ ಆಸ್ತಿ-ಪಾಸ್ತಿಯೂ ಹಾನಿಯಾಗಬಹುದು. ಆದ್ದರಿಂದ ಸಮಾಜ ಇದನ್ನು ಅಪರಾಧ ಎಂದು ಸ್ವೀಕರಿಸುತ್ತದೆ ಹಾಗಾಗಿ ಯಾರೂ ಇಂತಹ ಸನ್ನವೇಶಗಳಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭ ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮತ್ತು ಜಬ್ಬಾರ್ ಸಮೋ ಇವರನ್ನು ಸನ್ಮಾನಿಸಲಾಯಿತು. ಶಾಲಾ ಮಖ್ಯೋಪಾಧ್ಯಾಯ ಬಿಜೂರು ವಿಶ್ವೇಶ್ವರ ಅಡಿಗ ವಾರ್ಷಿಕ ವರದಿಮಂಡಿಸಿದರು. ಆರ್.ಕೆ. ಸಂಜೀವರಾವ್ನ್ಮಶತಾಬ್ದ ಆಚರಣಾ ಸಮಿತಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಉಪಸ್ಥಿತರಿದ್ದರು. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಕೆ. ಎಸ್. ಪ್ರಕಾಶ್ ರಾವ್ ಸ್ವಾಗತಿಸಿ, ಅನುಷಾ ಪೈ ಮತ್ತು ನಂದಿತಾ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

3 × five =