ಸಂವಹನ ಕೌಶಲ್ಯಾಭಿವೃದ್ಧಿ: ವಿಶೇಷ ಉಪನ್ಯಾಸ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ಪರ್ಧಾತ್ಮಕ ಯುಗದಲ್ಲಿ ಇರುವ ನಾವು ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಎದುರಿಸಲಿರುವ ಉದ್ಯೋಗ ಸಂದರ್ಶನ ಮತ್ತಿತರ ಕೆಲಸಗಳಿಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿರಬೇಕು, ಜೊತೆಗೆ ವೃತ್ತಿ ಕೌಶಲ್ಯದ ಸೂಕ್ಷ್ಮತೆಯನ್ನು ವಿದ್ಯಾರ್ಥಿಗಳು ಅರಿತಿರಬೇಕೆಂದು ಕುಂದಾಪುರದ ವಕೀಲರು ಹಾಗೂ ತರಬೇತುದಾರರಾದ ರಾಘವೇಂದ್ರ ಚರಣ್ ನಾವಡ ಅವರು ಹೇಳಿದರು.

Call us

Call us

Visit Now

ಅವರು ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ಘಟಕ, ಯುವ ಸ್ಪಂದನ ಹಾಗೂ ಕೋಸ್ಟಲ್ ಕುಂದಾಪುರ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ’ಸಂವಹನ ಕಲೆ ಮತ್ತು ಬೆಳವಣಿಗೆ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡಿದರು.

Click here

Call us

Call us

ಕೋಸ್ಟಲ್ ಕುಂದಾಪುರ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾಗಿರುವ ಅಶೋಕ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಸ್ಟಲ್ ಕುಂದಾಪುರ ಲಯನ್ಸ್ ಕ್ಲಬ್ ಇದರ ಉಪಾಧ್ಯಕ್ಷರಾದ ರತ್ನಕರ್ ಶೆಟ್ಟಿ, ಕೋಸ್ಟಲ್ ಕುಂದಾಪುರ ಲಯನ್ಸ್ ಕ್ಲಬ್ ಸದಸ್ಯರಾದ ಸುಕುಮಾರ, ಉದಯ್ ಹಾಗೂ ಕಾಲೇಜಿನ ವೃತ್ತಿ ಮಾರ್ಗದರ್ಶನ ಅಧಿಕಾರಿ ಮಹೇಶ್ ಬಾಬು ಉಪಸ್ಥಿತರಿದ್ದರು.

ಯುವ ಸ್ಪಂದನ ಕೇಂದ್ರ ಉಡುಪಿ ಇದರ ಸಂಯೋಜಕರಾದ ನರಸಿಂಹ ಗಾಣಿಗ ಪ್ರಾಸ್ತಾವಿಸಿದರು. ವಿದ್ಯಾರ್ಥಿಗಳಾದ ಸುಜಾತ ಖಾರ್ವಿ ಪ್ರಾರ್ಥಿಸಿ, ಸ್ವಾತಿ ಬಿಲ್ಲವ ಸ್ವಾಗತಿಸಿ, ಶರತ್ ಶೆಟ್ಟಿ ವಂದಿಸಿ, ಮಹೇಶ್ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

sixteen − thirteen =