ಸತ್ಕರ್ಮ, ಉಪಾಸನೆಯಿಂದ ಬದುಕಿನಲ್ಲಿ ಯೋಗ್ಯ ಫಲ: ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಸತ್ಕರ್ಮ, ಉಪಾಸನೆಗಳನ್ನು ನಿರಂತರವಾಗಿ ಮಾಡುತ್ತಿದ್ದರೆ ಜೀವನದಲ್ಲಿ ಯೋಗ್ಯ ಫಲ ದೊರೆಯುತ್ತದೆ. ಧರ್ಮ, ಸಂಸ್ಕಾರ, ಸಂಸ್ಕೃತಿ ಮೊದಲಾದವುಗಳನ್ನು ಅನುಸರಿಸುತ್ತಾ ಹಿರಿಯರು ನಡೆದುಕೊಂಡು ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಬೇಕು. ಆರಾಧನೆ, ಉಪಾಸನೆಗಳನ್ನು ಮಾಡುತ್ತಿದ್ದರೆ ನಮ್ಮಲ್ಲಿನ ಅಜ್ಞಾನ, ಅಂಧಕಾರ ದೂರವಾಗಿ ಜೀವನ ಪಾವನವಾಗುತ್ತದೆ ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Call us

Call us

ಅವರು ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನವನ್ನು ಪೂರ್ವಜರು ಬಹಳ ಶ್ರಮಪಟ್ಟು ಕಟ್ಟಿ ಬೆಳೆಸಿದ್ದು, ಶ್ರೀದೇವರ ಅನುಗ್ರಹದಿಂದ ದೇವಾಲಯ ಉತ್ತಮ ರೀತಿಯಲ್ಲಿ ಬೆಳೆದು ನಿಂತಿದೆ. ದೇವಾಲಯದ ಅಭಿವೃದ್ಧಿಯಿಂದ ದೇವರ ಸಾನಿಧ್ಯ ಕೂಡ ಹೆಚ್ಚಿ ಭಕ್ತರ ಮನೋಭಿಷ್ಟಗಳು ನೆರವೇರುತ್ತದೆ ಎಂದು ಅವರು ಹರಸಿದರು.

ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ರೋಹಿದಾಸ ನಾಯಕ್ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ದೇವಳದ ಅರ್ಚಕ ವೇದಮೂರ್ತಿ ಜಿ.ಅನಂಕಕೃಷ್ಣ ಭಟ್, ವೇದಮೂರ್ತಿ ಜಿ.ವಸಂತ ಭಟ್, ವೇದಮೂರ್ತಿ ಜಿ.ವಿಠಲದಾಸ ಭಟ್, ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ಗುಜ್ಜಾಡಿ ಶೇಷಗಿರಿ ನಾಯಕ್, ದೇವಸ್ಥಾನದ ಕಾರ್ಯದರ್ಶಿ ಗಣೇಶ ನಾಯಕ್, ಗುಜ್ಜಾಡಿ ನಾಯಕ್ ಕುಟುಂಬಸ್ಥರು, ಊರಿನ ಹತ್ತು ಸಮಸ್ತರು ಭಜಕರು ಉಪಸ್ಥಿತರಿದ್ದರು. ದೇವಸ್ಥಾನದ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಸ್ವಾಗತಿಸಿದರು.

Call us

Call us

Leave a Reply

Your email address will not be published. Required fields are marked *

seventeen − 2 =