ಸಪ್ತಾಹ ಗೀತಾ ಜಯಂತಿ ಉತ್ಸವ: ವಲಯ ಮಟ್ಟದ ಸ್ಪರ್ಧಾ ಕಾರ್ಯಕ್ರಮ ಸಮಾರೋಪ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣೆ ಸಮಿತಿ ಆಯೋಜಿಸಿದ ಸಪ್ತಾಹ ಗೀತಾ ಜಯಂತಿ ಉತ್ಸವ 2021 ಇದರ ವಲಯ ಮಟ್ಟದ ಸ್ಪರ್ಧಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಇತ್ತಿಚಿಗೆ ಜರುಗಿತು.

Call us

Call us

Call us

ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿಯವರು ಬಹುಮಾನ ವಿತರಿಸಿ ಮಾತನಾಡಿ ಭಗವದ್ಗೀತಾ ಅಭಿಯಾನದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಬಹುಮುಖ್ಯ. ಭಗವದ್ಗೀತೆ ಪಠಣದಿಂದಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಮನೋಬಲ ಹೆಚ್ಚುವುದಲ್ಲದೇ ಶೈಕ್ಷಣಿಕ ಸಾಧನೆ, ಜ್ಞಾನಸಿದ್ಧಿ ಗಳಿಸಲು ಸಾಧ್ಯವಿದೆ. ಹೆಚ್ಚೆಚ್ಚು ಮಂದಿಗೆ ಇದರ ಪ್ರಯೋಜನ ದೊರೆಯುವಂತಾಬೇಕು ಎಂದರು.

Call us

Call us

ಶ್ರೀಮದ್ಭಗವದ್ಗೀತಾ ಜಯಂತಿ ಆಚರಣೆ ಸಮಿತಿ ಅಧ್ಯಕ್ಷರಾದ ಬಿಜೂರು ರಾಮಕೃಷ್ಣ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರಿನ ರಾಮಕ್ಷತ್ರಿಯ ಮಾತೃ ಮಂಡಳಿ ಅಧ್ಯಕ್ಷರಾದ ಮಂಜುಳಾ ಶಿವಯ್ಯ, ರಾಮಕ್ಷತ್ರಿಯ ಯುವಕ ಸಮಾಜದ ಅಧ್ಯಕ್ಷರಾದ ದಿನಕರ ಪಟ್ವಾಲ್, ಉಪ್ಪುಂದ ರಾಘವೇಂದ್ರ ಮಠ ನವಗ್ರಹ ಮಂಟಪ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷರಾದ ರಮೇಶ್ ವೈದ್ಯ, ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿಯ ಕಾರ್ಯದರ್ಶಿ ಕೇಶವ ನಾಯಕ್, ಬೈಂದೂರು, ರತ್ತೂಬಾಯಿ ಜನತಾ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ, ಸಂಚಾಲಕರಾದ ಹನುಮಂತ ಜಿ., ಸಂಘಟಕರಾದ ನಾಗಪ್ಪ ಬಿಜೂರು ಉಪಸ್ಥಿತರಿದ್ದರು.

ಶಿಕ್ಷಕ ಎಸ್ ಮಹಾಬಲೇಶ್ವರ ಎಲ್ಲರನ್ನೂ ಸ್ವಾಗತಿಸಿದರು. ಮಂಜುನಾಥ ಬಿಜೂರು ಧನ್ಯವಾದ ಸಲ್ಲಿಸಿದರ, ಭಾಸ್ಕರ್ ಬಾಡ ಬಹುಮಾನ ಪಟ್ಟಿ ವಾಚಿಸಿದರು. ರವಿರಾಜ್ ಡಿ, ಗೋವಿಂದರಾಯ ಜಿ, ರಾಘವೇಂದ್ರ ಕೆ ಸಹಕರಿಸಿದರು. ಸೂರ್ಯಕಾಂತಿ ಭಾಸ್ಕರ್ ಮತ್ತು ಲಲಿತ ಕೇಶವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

16 − twelve =