ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರಿಗೆ ‘ಜನಾಧಿಕಾರ’ ಪುಸ್ತಕ ಹಸ್ತಾಂತರ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುಬ್ರಹ್ಮಣ್ಯ ಪಡುಕೋಣೆ ಮತ್ತು ಎಸ್. ಜನಾರ್ದನ ಮರವಂತೆ ಇವರು ‘ಜನಾಧಿಕಾರ’ ಪುಸ್ತಕವನ್ನು ಕೆ. ಪ್ರತಾಪಚಂದ್ರ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.

ಹಸ್ತಾಂತರಿಸಿದ ಪುಸ್ತಕಗಳನ್ನು ಸ್ವೀಕರಿಸಿದ ರೈತಸಂಘದ ಅಧ್ಯಕ್ಷ, ವಿಧಾನ ಪರಿಷತ್ತಿನ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ರಾಜ್ಯದ ಗ್ರಾಮ ಪಂಚಾಯಿತಿಗಳು ಜನಸಹಭಾಗಿತ್ವದ ಮೂಲಕ ಆಡಳಿತ ಮತ್ತು ಅಭಿವೃದ್ಧಿ ಕಾರ್ಯ ನಡೆಸಬೇಕು. ಅದಕ್ಕಾಗಿ ಜನಪ್ರತಿನಿಧಿಗಳಿಗೆ ಇರುವಂತೆ, ಜನರಿಗೂ ಅದರ ಕುರಿತಾದ ಅರಿವು ಇರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ರೈತಸಂಘದ 1200 ಸದಸ್ಯರಿಗೆ ಎಸ್. ಜನಾರ್ದನ ಮರವಂತೆ ಸಂಕಲಿಸಿ, ಜನಪ್ರತಿನಿಧಿ ಪ್ರಕಾಶನ ಹೊರತಂದಿರುವ ‘ಜನಾಧಿಕಾರ’  ಎಂಬ ಪುಸ್ತಕವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ. ಎಂದು ಹೇಳಿದರು

Call us

ರಾಜಕೀಯೇತರ ಸಂಘಟನೆಯಾದ ರೈತಸಂಘವು, ಹುಯ್ಯಾರು ಪಟೇಲ್ ಹಿರಿಯಣ್ಣ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಜತೆ ಸೇರಿಕೊಂಡು ವಾರಾಹಿ ನೀರಾವರಿ ಯೋಜನೆ, ಸಿಆರ್‌ಝಡ್ ನಿರ್ಬಂಧ, ಕಸ್ತೂರಿ ರಂಗನ್ ವರದಿ, ಉಡುಪಿಗೆ ನೀರು ಪೂರೈಸುವ ಮಾರ್ಗದಲ್ಲಿರುವ ಗ್ರಾಮಗಳಿಗೆ ನೀರು ಪೂರೈಕೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ಡೀಮ್ಡ್ ಫಾರೆಸ್ಟ್, ಕಾಡು ಪ್ರಾಣಿಗಳಿಂದ ಬೆಳೆಹಾನಿ ಇತ್ಯಾದಿ ರೈತ ಸಮುದಾಯದ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತ ಬಂದಿದೆ. ಟ್ರಸ್ಟ್ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿವಿಧ ನೆರವು, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹದಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅವೆಲ್ಲದರ ಮುಂದುವರಿಕೆಯಾಗಿ ರೈತಸಂಘದ ಸದಸ್ಯರು ಗ್ರಾಮ ಪಂಚಾಯಿತಿ ವ್ಯವಸ್ಥೆಯ ಸಮಗ್ರ ಅರಿವು ಪಡೆದು ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿ ಜವಾಬ್ದಾರಿಯಿಂದ ಭಾಗವಹಿಸಬೇಕು ಪಂಚಾಯಿತಿಗಳು ಕಾಯಿದೆ, ನಿಯಮಗಳ ಚೌಕಟ್ಟಿನಲ್ಲಿ, ಭ್ರಷ್ಟಾಚಾರ ಮುಕ್ತವಾಗಿ ನೈಜ ಅಭಿವೃದ್ಧಿಯ ಗುರಿ ಇರಿಸಿಕೊಂಡು ಕಾರ್ಯವೆಸಗುವಂತೆ ಎಚ್ಚರ ವಹಿಸಬೇಕು ಎನ್ನುವ ಉದ್ದೇಶದಿಂದ ಈ ಪುಸ್ತಕ ವಿತರಿಸಲಾಗುತ್ತಿದೆ ಎಂದು ಪುಸ್ತಕ ಖರೀದಿಸಿದ ಉದ್ದೇಶವನ್ನು ವಿವರಿಸಿದರು.

ಜನಾಧಿಕಾರದ ಎರಡನೆ ಆವೃತ್ತಿಯಸುವ ಮೂಲಕ ಪುಸ್ತಕ ಪ್ರಕಟಣೆಯ ಉದ್ದೇಶ ಸಾಧನೆಗೆ ವಿಶೇಷ ಕೊಡುಗೆ ಮತ್ತು ಪ್ರೋತ್ಸಾಹ ನೀಡಿದ ಬಗ್ಗೆ ಎರಡು ಸಂಸ್ಥೆಗಳ ಅಧ್ಯಕ್ಷರಾದ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಸುಬ್ರಹ್ಮಣ್ಯ ಪಡುಕೋಣೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

3 × 3 =