ಸಮಾಜ ಜಾಗೃತವಾದಾಗ ಮಾತ್ರ ಅಪರಾಧ ತಡೆ ಸಾಧ್ಯ : ವೃತ್ತನಿರೀಕ್ಷಕ ಸುದರ್ಶನ್

Call us

Call us

ಬೈಂದೂರು: ಹಿಂದೆ ಗ್ರಾಮೀಣ ಭಾಗಗಳಲ್ಲಿ ಅಪರಾಧಗಳು ನಡೆಯುತ್ತಿರುವುದು ಕಡಿಮೆಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ವಿಧ ವಿಧವಾದ ಆಸೆ-ಆಮಿಷಗಳಿಂದ ಹಳ್ಳಿಯ ಮುಗ್ದ ಜನರ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡು ಸಮಾಜ ಘಾತುಕರು, ವಿಕೃತ ಮನಸ್ಸಿನವರು ಅಮಾನವೀಯ ಕೃತ್ಯಗಳನ್ನು ಮಢುತ್ತಿದ್ದಾರೆ. ಇದರಿಂದ ಅಮಾಯಕ ಮಹಿಳೆಯರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದು ಬೈಂದೂರು ವೃತ್ತನಿರೀಕ್ಷಕ ಸುದರ್ಶನ್ ಎಂ ಹೇಳಿದರು.

Click here

Click Here

Call us

Call us

Visit Now

Call us

Call us

ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಅತೀ ಹಿಂದುಳಿದ ಪೈನಾಡಿ ಎಂಬ ಕುಗ್ರಾಮದ ಸಕಿಪ್ರಾ ಶಾಲೆಯಲ್ಲಿ ಭಾನುವಾರ ಸಂಜೆ ಬೈಂದೂರು ಆರಕ್ಷಕ ಠಾಣೆ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಕಾನೂನು ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಜನವರಿ 2015ರಿಂದ ಡಿಸೆಂಬರ್‌ವರೆಗೆ 25 ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಗಳ ದೂರು ದಾಖಲಾಗಿದ್ದು, ಅದರಲ್ಲಿ ಎಂಟು ಮಹಿಳೆಯರು ತಾಯಾಗಿದ್ದಾರೆ. ಅಲ್ಲದೇ ಏಳು ಮಹಿಳೆಯರ ಕೊಲೆಗಳು ನಡೆದಿದ್ದು, ಅವೆಲ್ಲವೂ ಗ್ರಾಮೀಣ ಭಾಗದಲ್ಲಿ ಸಂಭವಿಸಿದೆ ಎಂದು ಅಂಕಿ-ಅಂಶ ನೀಡಿದ ಅವರು, ಪೋಲಿಸರು ಸಮಾಜ ಕಾಯುವ ಸೈನಿಕರು. ನಿಮ್ಮೆಲ್ಲರ ರಕ್ಷಣೆ ನಮ್ಮ ಹೊಣೆಯಾಗಿದೆ. ಹೆಂಗಸರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಊರನಲ್ಲಿ ನಡೆಯುತ್ತಿರುವ ಕಳ್ಳತನಗಳ ಬಗ್ಗೆ ಮಾಹಿತಿ ಅಥವಾ ಅನುಮಾನಗಳಿದ್ದರೆ ನೇರವಾಗಿ ಬಂದು ಠಾಣೆಗೆ ದೂರು ನೀಡಿ ಅಥವಾ ದಯಮಾಡಿ ಪೋಲಿಸರಿಗೆ ತಿಳಿಸಿ. ಇದರಿಂದ ಅಪರಾಧಿಗಳನ್ನು ಹಿಡಿಯಲು ಸಹಕಾರಿಯಾಗುತ್ತದೆ. ಸಮಾಜ ಜಾಗೃತವಾದಾಗ ಮಾತ್ರ ಅಪರಾಧ ತಡೆಯಲು ಸಾಧ್ಯ. ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಾರ್ವಜನಿಕರು ಪೋಲಿಸರೊಂದಿಗೆ ಕೈ ಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾಲ್ತೋಡು ಗ್ರಾಪಂ ಉಪಾಧ್ಯಕ್ಷ ಬಟ್ನಾಡಿ ಅಣ್ಣಪ್ಪ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಠಾಣಾಧಿಕಾರಿ ಸಂತೋಷ್ ಎ. ಕಾಯ್ಕಿಣಿ ಉಪಸ್ಥಿತರಿದ್ದರು. ನವೋದಯ ಸ್ವ-ಸಹಾಯ ಸಂಘದ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ ವಂದಿಸಿದರು. ಈ ಭಾಗದ ಸ್ತ್ರೀಶಕ್ತಿ ಗುಂಪಿನ ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ಕಾನೂನು ಮಾಹಿತಿ ಪಡೆದರು.

[quote bgcolor=”#ffffff” arrow=”yes”]ಅಪರಾಧ ಕೃತ್ಯಗಳಿಗೆ ಯಾವುದೇ ವ್ಯಾಪ್ತಿಯಿಲ್ಲ. ಇದು ವಿಶ್ವವ್ಯಾಪಿ. ಕೆಲವು ಸಂದರ್ಭಗಳಲ್ಲಿ ಮನುಷ್ಯನ ಮನಸ್ಸು ವಿಕೃತಗೊಂಡು ಕೆರಳಿದಾಗ ಅಪರಾಧಗಳು ಸಂಭವಿಸುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಮಹಿಳಾ ಸಭೆಗಳನ್ನು ನಡೆಸಿ ಅವರಿಗೆ ಕಾನೂನಿನ ಅರಿವು ಮೂಡಿಸುವ ಜೊತೆಗೆ ಅಪರಾಧ ತಡೆಯುವ ಪ್ರಯತ್ನ ಪೋಲಿಸ್ ಇಲಾಖೆ ಮಾಡುತ್ತಿದೆ.- ಸಂತೋಷ್ ಆನಂದ್ ಕಾಯ್ಕಿಣಿ, ಠಾಣಾಧಿಕಾರಿ ಬೈಂದೂರು.[/quote]

Call us

Leave a Reply

Your email address will not be published. Required fields are marked *

eleven + eighteen =