ಸಮುದಾಯ ಕುಂದಾಪುರದ ತಿಂಗಳ ಓದು ಕಾರ್ಯಕ್ರಮ: ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಮುದಾಯ ಸಾಂಸ್ಕೃತಿಕ ಸಂಘಟನೆ ಹಾಗೂ ಜನಪ್ರತಿನಿಧಿ ಕುಂದಾಪುರದ ಸಹಯೋಗದೊಂದಿಗೆ ನಡೆದ ತಿಂಗಳ ಓದು ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಓದು ಕಾರ್ಯಕ್ರಮವು ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಕುರಿತು ನಡೆಯಿತು.

Call us

Call us

ಆರಂಭದಲ್ಲಿ ಸಮುದಾಯದ ಬಾಲಕೃಷ್ಣ ಕೆ ಎಂ, ವಾಸುದೇವ ಗಂಗೇರ, ವಿಕ್ರಮ ಕುಂದಾಪುರ, ಅವಂತಿ ಮತ್ತು ಲಂಕೇಶ್ ಇವರು ಕುವೆಂಪುರವರ “ಓ ನನ್ನ ಚೇತನ” ಮತ್ತು “ಹಾಲು ಹಳ್ಳ ಹರಿಯಲಿ” ಹಾಡುಗಳ ಕಾರ್ಯಕ್ರಮ ನಡೆಸಿಕೊಟ್ಟರು.

Click here

Click Here

Call us

Call us

Visit Now

ನಂತರ ಸಮುದಾಯದ ಸದಸ್ಯರಾದ ರಮೇಶ್ ಗುಲ್ವಾಡಿ ಮತ್ತು ವಿಕ್ರಮ ಕುಂದಾಪುರ ಅವರು ಕುವೆಂಪು ಅವರ ಸಾವಿನ ಸಮತೆ ಮತ್ತು ರೈತ ದೃಷ್ಟಿ ಕವನಗಳನ್ನು ವಾಚಿಸಿದರು

ಅಂದಿನ ಮುಖ್ಯ ಉಪನ್ಯಾಸಕಾರರಾಗಿ ಸಂತೋಷ್ ಕುಮಾರ್ ಶೆಟ್ಟಿ ಮೊಳಹಳ್ಳಿ ಅವರು ಕುವೆಂಪುರವರ ಕವಿತೆಗಳು, ಕಾದಂಬರಿಗಳು, ನಾಟಕ, ಬದುಕು ಮತ್ತು ಬರಹ ವಿಮರ್ಶೆ ಗಳ ಕುರಿತು ಮಾತನಾಡಿದರು.

ಪ್ರತಿಕ್ರಿಯೆಯಾಗಿ ಭಂಡಾರ್ಕರ್ಸ್ ಕಾಲೇಜಿನ ಪ್ರಾಧ್ಯಾಪಕರಾದ ಹಯವದನ ಉಪಾಧ್ಯ ಅವರು ತಮ್ಮ ವಿಚಾರಗಳನ್ನು ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ನಿವ್ರತ್ತ ಪ್ರಾಧ್ಯಾಪಕರಾದ ಡಾ. ಎಂ. ದಿನೇಶ್ ಹೆಗ್ಡೆ ಅವರು ಕುವೆಂಪು ಅವರ ಬರಹಗಳಲ್ಲಿನ ನಿಲುವುಗಳು ವಿವಿಧ ಸಾಮಾಜಿಕ ವಿಚಾರಗಳಿಂದ ಹೇಗೆ ಪ್ರಭಾವಿತಗೊಂಡಿರಬಹುದು ಎಂಬ ಪ್ರಶ್ನೆ ಎತ್ತಿದರು

Call us

ಸಮುದಾಯದ ಸದಸ್ಯರಾದ ಗಣೇಶ್ ಅವರು ರಂಗ ನಿರ್ದೇಶಕ ಬಸವಲಿಂಗಯ್ಯ ಅವರ ಒಂಬತ್ತು ಗಂಟೆಯ ಮಲೆಗಳಲ್ಲಿ ಮದುಮಗಳು ನಾಟಕದಲ್ಲಿನ ಪಾತ್ರಧಾರಿಯಾಗಿ ತಮ್ಮ ಅನುಭವ ಹಂಚಿಕೊಳ್ಳುವುದರ ಜೊತೆಗೆ ಕುವೆಂಪು ಸಾಹಿತ್ಯದ ಕುರಿತು ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಅನೇಕ ಸಾಹಿತಿಗಳು, ಸಾಹಿತ್ಯ ಅಭಿಮಾನಿಗಳು, ಸಮುದಾಯದ ಸದಸ್ಯರು ಭಾಗವಹಿಸಿದ್ದರು.

ಸಮುದಾಯ ಕುಂದಾಪುರದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರು ಕುವೆಂಪು ಅವರ ಕುರಿತು ಸೂಕ್ಷ್ಮವಾಗಿ ಪರಿಚಯಿಸಿ, ಪ್ರಾಸ್ತಾವಿಕವಾಗಿ ಮಾತಾಡಿ, ಸ್ವಾಗತಿಸಿದರು

ಸಮುದಾಯ ಕುಂದಾಪುರದ ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಗೈದರು.

Leave a Reply

Your email address will not be published. Required fields are marked *

6 − 2 =