ಸಮುದಾಯ ಕುಂದಾಪುರ: ರಂಗರಂಗು ರಜಾಮೇಳ ಸಮಾರೋಪ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮುದಾಯವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೊತೆಗೂಡಿ ನಡೆಸಿದ ಹತ್ತು ದಿನಗಳ ರಂಗರಂಗು ರಜಾಮೇಳದ ಸಮಾರೋಪ ಸಮಾರಂಭ ಮತ್ತು ಮೇಳದ ಮಕ್ಕಳ ನಾಟಕ ಪ್ರದರ್ಶನ ಕುಂದಾಪುರದ ಗಾಂಧಿಪಾರ್ಕಿನ ಬಾಲಭವನದಲ್ಲಿ ನಡೆಯಿತು.

Call us

Call us

ಸಮಾರೋಪ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೆ.ಸಿ.ಐ ಚರಿಷ್ಮಾ, ಕುಂದಾಪುರ ಇದರ ಅಧ್ಯಕ್ಷರಾದ ಶ್ರೀಮತಿ ಗೀತಾಂಜಲಿ ಆರ್ ನಾಯ್ಕ್ ಮಾತನಾಡಿ ಮಕ್ಕಳ ಬಾಲ್ಯವು ಅವರ ಇಡೀ ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ಅಂತಹ ಬಾಲ್ಯವನ್ನು ಕಟ್ಟಲು ಸಮುದಾಯ ನಡೆಸುವ ಮಕ್ಕಳ ಮೇಳ ಸಹಕಾರಿ ಎಂದರು. ಸಭೆಯಲ್ಲಿ ಶ್ರೀ ಕೆ.ಆರ್ ನಾಯ್ಕ್, ಶ್ರೀಮತಿ ಅಭಿಲಾಷಾ ಹಂದೆ, ಸಿ.ಡಿ.ಪಿ.ಓ ಶ್ರೀಮತಿ ಶಶಿಕಲಾ ಸಭೆಯಲ್ಲಿ ಉಪಸ್ಥಿತರಿದ್ದರು. ಸಮುದಾಯ ಕುಂದಾಪುರದ ಅಧ್ಯಕ್ಷರಾದ ಉದಯ ಗಾಂವಕಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಾಸುದೇವ ಗಂಗೇರ ಸ್ವಾಗತಿಸಿದರು. ರವಿ ಕಟ್ಕೆರೆ ವಂದಿಸಿದರು.

 

Call us

Call us

ಸದಾನಂದ ಬೈಂದೂರು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಚಿನ್ನಾ ವಾಸುದೇವ ನಿರ್ದೇಶನದಲ್ಲಿ ‘ಮಳೆ ಬಂತು ಮಳೆ‘ ಮತ್ತು ವಿನಾಯಕ ಎಸ್ ಎಮ್ ನಿರ್ದೇಶನದಲ್ಲಿ ‘ಕುಣಿ ಕುಣಿ ನವಿಲೇ‘ ನಾಟಕಗಳು ಪ್ರದರ್ಶನಗೊಂಡವು. ಪ್ರೊ. ಹಯವದನ ಮೂಡುಸಗ್ರಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.

Leave a Reply

Your email address will not be published. Required fields are marked *

10 − three =