ಸಮುದಾಯ ರೆಪರ್ಟರಿ ರಂಗಸಂಚಾರ: ಕುಂದಾಪುರದಲ್ಲಿ ಪ್ರದರ್ಶನ

Call us

Call us

Call us

Call us

ಕುಂದಾಪುರ: ಸಮುದಾಯ ರೆಪರ್ಟರಿಯ ಮೃತ್ಯುಂಜಯ ನಾಟಕವನ್ನು ಕುಂದಾಪುರದ ರೋಟರಿ ಕಲಾಮಂದಿರದಲ್ಲಿ ಪ್ರದರ್ಶಿಸಲಾಯಿತು. ಪ್ರದರ್ಶನದ ಆರಂಭದಲ್ಲಿ ಬಸ್ರೂರಿನ ಶಾರದಾ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ ಸಮುದಾಯದ ಜೀವನ ಪ್ರೀತಿಯ ನಡೆಗಳನ್ನು ಶ್ಲಾಘಿಸಿ, ಪ್ರದರ್ಶನಕ್ಕೆ ಶುಭ ಹಾರೈಸಿದರು.

Call us

Click Here

Click here

Click Here

Call us

Visit Now

Click here

ರೆಪರ್ಟರಿಯ ವ್ಯವಸ್ಥಾಪಕ ದೇವೇಂದ್ರ ಗೌಡ ರೆಪರ್ಟರಿಯ ಮುಂದಿನ ದಿನಗಳ ಪ್ರವಾಸದ ಪರಿಚಯ ಮಾಡಿದರು. ಕುಂದಾಪುರ ಸಮುದಾಯದ ಅಧ್ಯಕ್ಷ ಉದಯ ಗಾಂವಕಾರ ಮಾತನಾಡಿ ಕಲೆ ಕೇವಲ ಮನರಂಜನೆಗಾಗಿ ಎಂಬ ಲೋಲುಪತೆಯಿಂದ ಹೊರಬಂದು ವರ್ತಮಾನದ ತಲ್ಲಣಗಳಿಗೆ ಪ್ರತಿಕ್ರಿಸುತ್ತಾ, ಸ್ಪಂದಿಸುತ್ತಾ ರಂಗಭೂಮಿಯನ್ನು ಸಮಕಾಲೀನಗೊಳಿಸುವ ಜವಾಬ್ಧಾರಿ ಸಮುದಾಯ ರೆಪರ್ಟರಿಯ ಮೇಲಿದೆ ಎಂದರು.

ಮೃತ್ಯುಂಜಯ ನಾಟಕವನ್ನು ನಿರಂಜನರ ಮೃತ್ಯುಂಜಯ ಮತ್ತು ಚಿರಸ್ಮರಣೆ ನಾಟಕಗಳನ್ನು ಸಂಕರಗೊಳಿಸಿ ಡಾ. ಎಮ್. ಜಿ. ಹೆಗಡೆ ರಚಿಸಿದ ರಂಗಪಠ್ಯವನ್ನು ಡಾ. ಶ್ರೀಪಾದ ಭಟ್ ರೆಪರ್ಟರಿಗಾಗಿ ನಿರ್ದೇಶಿಸಿರುವರು. ಒಂದು ಚಾರಿತ್ರಿಕ ಸಂದರ್ಭದಲ್ಲಿ, ಕನ್ನಡ ರಂಗಭೂಮಿಗೆ ಹೊಸದಿಕ್ಕನ್ನೂ ಕನ್ನಡದ ಅಭಿವ್ಯಕ್ತಿಗೆ ಹೊಸ ಚಿಂತನ ಕ್ರಮಗಳನ್ನೂ ಒದಗಿಸಿದ ಸಮುದಾಯ ಸಂಘಟನೆಯು ಮತ್ತೊಂದು ಮಹತ್ವದ ಪ್ರಯತ್ನದಲ್ಲಿ ಸಮುದಾಯ ಕರ್ನಾಟಕ ರೆಪರ್ಟರಿಯನ್ನು ಆರಂಭಿಸಿದೆ.

Leave a Reply

Your email address will not be published. Required fields are marked *

19 − four =