ಸಮುದಾಯ ಸಂಘಟನೆಯಿಂದ ಯುವಕರಿಗೆ ಸೂಕ್ತ ಮಾರ್ಗದರ್ಶನ ದೊರೆಯಬೇಕು: ಗೋಪಾಲ ಪೂಜಾರಿ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೆಲವು ಸಂಘಟನೆಗಳು ಹಿಂದುಳಿದ ಸಮುದಾಯದ ಯುವಕರ ದಿಕ್ಕು ತಪ್ಪಿಸಿ ತಮ್ಮ ಹೋರಾಟಗಳಲ್ಲಿ ಬಳಸಿಕೊಳ್ಳುತ್ತಿವೆ. ಮುಂದಾಗುವುದರ ಕುರಿತು ವಿವೇಚಿಸದೆ ಮುನ್ನುಗ್ಗುವ ಆ ಯುವಕರು ಬಂಧನ, ಜೈಲುವಾಸ ಅನುಭವಿಸಬೇಕಾಗುತ್ತದೆ. ಸಮುದಾಯ ಸಂಘಟನೆಗಳು ತಮ್ಮ ಯುವಕರನ್ನು ಎಚ್ಚರಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

Call us

Call us

Click Here

Visit Now

ಮರವಂತೆಯ ಸಾಧನಾ ಮಂಟಪದಲ್ಲಿ ಡಿ.28ರಂದು ನಡೆದ ಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು. ’ಸಮುದಾಯದ ದುರ್ಬಲ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಸಂಘಟನೆ ಆದ್ಯತೆ ನೀಡಬೇಕು. ಅಂತವರಿಗೆ ಆರ್ಥಿಕ ನೆರವು ನೀಡಬೇಕು. ಬಿಲ್ಲವರ ಮಾತೃ ಸಂಘ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಅದರ ಮತ್ತು ಸ್ಥಳೀಯ ದಾನಿಗಳ ನೆರವು ಪಡೆಯಬೇಕು. ಯಾವುದೇ ಬಿಲ್ಲವ ಸಂಘ ತನ್ನ ಸ್ವಂತ ನೆಲೆ ನಿರ್ಮಿಸಿಕೊಳ್ಳಲು ಮುಂದಾದರೆ ಅದಕ್ಕೆ ಸರ್ಕಾರದ ನೆರವು ದೊರಕಿಸಿಕೊಡಲಾಗುವುದು’ ಎಂದು ಭರವಸೆಯಿತ್ತರು.

Click here

Click Here

Call us

Call us

ಸಂಘದ ಅಧ್ಯಕ್ಷ ಎಂ. ಅಣ್ಣಪ್ಪ ಬಿಲ್ಲವ ಸ್ವಾಗತಿಸಿ ೨೦ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಸಂಘ ನಡೆದುಬಂದ ದಾರಿಯನ್ನು ಸ್ಮರಿಸಿದರು ಜತೆ ಕಾರ್ಯದರ್ಶಿ ಶ್ಯಾಮಲಾ ವರದಿ ಓದಿದರು. ಕೋಶಾಧಿಕಾರಿ ಸೋಮಯ್ಯ ಬಿಲ್ಲವ ವಂದಿಸಿದರು. ಕಾರ್ಯದರ್ಶಿ ಶಂಕರ ಬಿಲ್ಲವ ನಿರೂಪಿಸಿದರು.

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷೆ ಗಣೇಶ ಪೂಜಾರಿ, ಮರವಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರಾದ ಆನಂದ ಪೂಜಾರಿ, ಸುಶೀಲಾ ಪೂಜಾರಿ, ಉದ್ಯಮಿ ನರಸಿಂಹ ಪೂಜಾರಿ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಶೇಖರ ಪೂಜಾರಿ, ಗೌರವಾಧ್ಯಕ್ಷ ಪುಟ್ಟ ಬಿಲ್ಲವ, ಪದಾಧಿಕಾರಿಗಳಾದ ಅಣ್ಣಯ್ಯ ಪೂಜಾರಿ, ಸಂಜೀವ ಪೂಜಾರಿ, ಸುಧಾ ಇದ್ದರು.

ಸಮುದಾಯದ ಪ್ರತಿಭಾವಂತ ಮಕ್ಕಳನ್ನು, ದಾನಿಗಳನ್ನು ಸನ್ಮಾನಿಸಲಾಯಿತು. ಮಕ್ಕಳ ಕಲಾಪ್ರದರ್ಶನ, ಯಕ್ಷಗಾನ ನಡೆದುವು. ಮಧ್ಯಾಹ್ನ ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ನಡೆದಿತ್ತು.

Leave a Reply

Your email address will not be published. Required fields are marked *

sixteen − two =