ಸಮೃದ್ಧಿ ಯುವಕ ಮಂಡಲ ರಜತ ಮಹೋತ್ಸವಕ್ಕೆ ಚಾಲನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ರಜತ ಮಹೋತ್ಸವದ ಹೊಸ್ತಿಲಲ್ಲಿರುವ ಶಂಕರನಾರಾಯಣ ಕುಳ್ಳಂಜಿಯ ಸಮೃದ್ಧಿ ಯುವಕ ಮಂಡಲ ವತಿಯಿಂದ ಹಸಿರು ಸಮೃದ್ಧಿ ಉಸಿರು ಸಮೃದ್ಧಿ ಅಭಿಯಾನದಡಿ ಔಷಧಿಯ ಗಿಡ ನೆಡುವುದರ ಮೂಲಕ ರಜತಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

Call us

Call us

ಈ ಅಭಿಯಾನದಲ್ಲಿ ಜುಲೈ ತಿಂಗಳಲ್ಲಿ ಯುವಕ ಮಂಡಲ ವ್ಯಾಪ್ತಿಯ ಪ್ರತಿಯೊಂದು ಮನೆಗೆ ತೆರಳಿ ಔಷದೀಯ ಗಿಡ ನೆಟ್ಟು ಆಚರಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವೇದಮೂರ್ತಿ ಸೂರ್ಯನಾರಾಯಣ ಬಾಯಿರಿ ಔಷದೀಯ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದು ಗಿಡ ನೆಟ್ಟು ಹಸಿರು ಸಮೃದ್ಧಿ ಉಸಿರು ಸಮೃದ್ಧಿ ಅಭಿಯಾನಕ್ಕೆ ಶುಭ ಹಾರೈಸಿದರು.

Call us

Call us

ಸಂಸ್ಥೆಯ ಉಪಾಧ್ಯಕ್ಷರಾದ ನಾರಾಯಣ ತೆಂಕಿನಗದ್ದೆ ಈ ಒಂದು ಅಭಿಯಾನದಲ್ಲಿ ಔಷದೀಯ ಗಿಡದ ಸಂಪೂರ್ಣ ವೆಚ್ಚ ಭರಿಸುವುದರೊಂದಿಗೆ, ಅವರ ಉಸ್ತುವಾರಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮೃದ್ಧಿ ಯುವಕ ಮಂಡಲದ ಅಧ್ಯಕ್ಷರಾದ ಯೋಗೀಶ ದೇವಾಡಿಗ, ಕಾರ್ಯದರ್ಶಿ ಸಂದೀಪ ಎಳಜೆಡ್ಡು, ಯುವಕ ಮಂಡಲದ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

16 − nine =