ಸರಕಾರಿ ಕಚೇರಿಗಳಿಗೆ ರೋಟರಿ ಕುಂದಾಪುರದಿಂದ ಡಸ್ಟ್‌ಬಿನ್ ಕೊಡುಗೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಜನಸಾಮಾನ್ಯರು ನಿತ್ಯ ಒಂದಲ್ಲ ಒಂದು ಕಾರಣದಿಂದ ಸರಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಿರುತ್ತಾರೆ. ಜನರ ನಿತ್ಯ ಸಂಚಾರ ಹೆಚ್ಚಿರುವ ಕಡೆಗಳಲ್ಲಿ ಅನುಪಯುಕ್ತ ವಸ್ತುಗಳು, ಕಾಗದದ ಚೂರುಗಳು, ಪ್ಲಾಸ್ಟಿಕ್ ಇನ್ನಿತರ ಕಸಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದನ್ನು ಕಾಣುತ್ತೇವೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರೋಟರಿ ಕ್ಲಬ್ ಕುಂದಾಪುರ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಸಲುವಾಗಿ ಡಸ್ಟ್‌ಬಿನ್‌ನ್ನು ಕೊಡುಗೆಯಾಗಿ ನೀಡಿದೆ.

Call us

Call us

ಕುಂದಾಪುರ ಸಹಾಯಕ ಉಪ ವಿಭಾಗಾಧಿಕಾರಿಯವರ ಕಚೇರಿ, ತಹಶೀಲ್ದಾರ್ ಅವರ ಕಚೇರಿ, ಕುಂದಾಪುರ ಪೋಲಿಸ್ ಠಾಣೆ, ಕುಂದಾಪುರದ ಸರಕಾರಿ ಆಸ್ಪತ್ರೆ, ಕುಂದಾಪುರ ತಾಲೂಕು ಪಂಚಾಯತ್ ಕಚೇರಿ, ಭಾರತೀಯ ಜೀವವಿಮಾ ನಿಗಮ ಕಚೇರಿಗಳಲ್ಲಿ ಸ್ವಚ್ಚತೆಯ ದೃಷ್ಠಿಯಿಂದ ಡಸ್ಟ್‌ಬಿನ್‌ಗಳನ್ನು ಕ್ಲಬ್‌ನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅಧಿಕಾರಿಗಳಿಗೆ ಹಸ್ತಾಂತರಿಸಿ, ಕೊಡುಗೆಯ ಸದ್ಭಳಕೆ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ 2016-17ನೇ ಸಾಲಿನ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಟಿ.ಬಿ. ಶೆಟ್ಟಿ, ರಾಘವೇಂದ್ರಚರಣ ನಾವಡ, ವೆಂಕಟೇಶ ನಾವುಂದ, ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.

Call us

Call us

?
?

Leave a Reply

Your email address will not be published. Required fields are marked *

ten + 9 =