ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೋವಿಡ್ ಸಂಬಂಧಸಿದ ಜೂನ್ 4ರಂದು ಬೈಂದೂರು ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೈಂದೂರು- ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ 766-ಸಿ ಗೆ ಹೊಂದಿಕೊಂಡಿರುವ ಗೋಳಿಹೊಳೆ ಗ್ರಾಮದ ಹೆಲಿಪ್ಯಾಡ್ ಪಕ್ಕದಲ್ಲಿರುವ ಸ.ನಂ:310 ರಲ್ಲಿ ಸುಮಾರು 5.00 ಎಕ್ರೆ ಸರಕಾರಿ ಜಮೀನು ಅತಿಕ್ರಮಿಸಿ, ಅಲ್ಲಿರುವ ಬೆಲೆಬಾಳುವ ಮರ-ಮಟ್ಟುಗಳನ್ನು ನೆಲಸಮ ಮಾಡಿ, ಸರಕಾರಿ ಜಮೀನನ್ನು ಕಬಳಿಸಿರುವುದು ಕಂಡುಬಂದಿರುತ್ತದೆ.
ಕೋವಿಡ್ -19ರ ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಸರಕಾರಿ ಜಮೀನನ್ನು ಅತಿಕ್ರಮಿಸುವ ಕ್ರಮವು ಕಾನೂನುಬಾಹಿರವಾಗಿದ್ದು, ಈ ಅತಿಕ್ರಮಣವನ್ನು ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಬೈಂದೂರು ತಹಶೀಲ್ದಾರರಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.