ಸರಸ್ವತಿ ವಿದ್ಯಾಲಯದಲ್ಲಿ ಕಯ್ಯಾರರಿಗೆ ನಮನ

Call us

Call us

Call us

Call us

ಗ೦ಗೊಳ್ಳಿ: ಕನ್ನಡದ ಜನರಲ್ಲಿ ನಾಡುನುಡಿಯ ಬಗೆಗೆ ಅಭಿಮಾನವನ್ನು ಜಾಗೃತಗೊಳಿಸಿ ಅವರಲ್ಲಿ ಹೋರಾಟದ ಮನೋಭಾವನೆಯನ್ನು ಬೆಳೆಸುವಲ್ಲಿ ಒರ್ವ ಸಾಹಿತಿಯಾಗಿ ಕಯ್ಯಾರರ ಪಾತ್ರ ಅತ್ಯ೦ತ ಮಹತ್ವವಾದುದು.ನಾವು ಕಯ್ಯಾರರು ಬದುಕಿ ಬ೦ದ ದಾರಿಯನ್ನು ಅಧ್ಯಯನ ಮಾಡುವ ಮೂಲಕ ಅವರನ್ನು ಅರಿತುಕೊಳ್ಳುವ ಪ್ರಯತ್ನ ಮಾಡುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾ೦ಜಲಿ ಎ೦ದು ಸರಸ್ವತಿ ವಿದ್ಯಾಲಯದ ಕನ್ನಡ ಉಪನ್ಯಾಸಕ ಸುಜಯೀ೦ದ್ರ ಹ೦ದೆ ಅವರು ಅಭಿಪ್ರಾಯಪಟ್ಟರು.

Call us

Click Here

Click here

Click Here

Call us

Visit Now

Click here

ಅವರು ಕಳೆದ ಭಾನುವಾರ ನಿಧನರಾದ ಕನ್ನಡದ ಖ್ಯಾತ ಕವಿ ಸಾಹಿತಿ ಕಯ್ಯಾರ ಕಿ೦ಞ್ಞಣ್ಣ ರೈ ಅವರಿಗೆ ಶ್ರದ್ಧಾ೦ಜಲಿ ಅರ್ಪಿಸುವ ನಿಟ್ಟಿನಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊ೦ಡಿದ್ದ ‘ಕಯ್ಯಾರ ನಮನ’ ಕಾರ‍್ಯಕ್ರಮದಲ್ಲಿ ನುಡಿನಮನಸಲ್ಲಿಸಿ ಮಾತನಾಡಿದರು.

ಕಾಲೇಜಿನ ಆಡಳಿತ ಮ೦ಡಳಿಯ ಕಾರ‍್ಯದರ್ಶಿ ಎನ್ ಸದಾಶಿವನಾಯಕ್, ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್,ಜೀವಶಾಸ್ತ್ರ ಉಪನ್ಯಾಸಕಿ ಕವಿತಾ ಎಮ್ ಸಿ ಅವರು ನುಡಿನಮನ ಸಲ್ಲಿಸಿದರು. ಕಾರ‍್ಯಕ್ರಮದ ಮೊದಲಿಗೆ ಕಯ್ಯಾರರ ಭಾವಚಿತ್ರಕ್ಕೆ ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಪುಷ್ಪನಮನ ಅರ್ಪಿಸಿ ಮೌನ ಪ್ರಾರ್ಥನೆ ಸಲ್ಲಿಸಿದರು.

ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಕಾರ‍್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಅರುಣ್ ಕುಮಾರ್ ಟಿ ಧನ್ಯವಾದಗೈದರು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Call us

Leave a Reply

Your email address will not be published. Required fields are marked *

16 − fifteen =