ಸರಸ್ವತಿ ವಿದ್ಯಾಲಯದಲ್ಲಿ ಗಮಕ ವಾಚನ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.

ಗಂಗೊಳ್ಳಿ: ಶಿಕ್ಷಣವೆಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಪಾಠ ಪ್ರವಚನಗಳಲ್ಲ, ಪಠ್ಯಕ್ಕಿಂತ ಹೊರತಾದ ಅಮೂಲ್ಯ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಾದರೆ ಹತ್ತು ಹಲವು ಮುಖಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಪುರಾಣ ಕಾವ್ಯಗಳ ಓದು ಮತ್ತು ಅಧ್ಯಯನ ವಿದ್ಯಾರ್ಥಿಗಳಲ್ಲಿ ನೈತಿಕವಾದ ಜಾಗೃತಿಯನ್ನುಂಟು ಮಾಡುತ್ತದೆ - ಎಂದು ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಅಧ್ಯಕ್ಷರಾದ ಡಾ| ಕಾಶೀನಾಥ ಪೈ ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ| ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ(ರಿ) ಗಂಗೊಳ್ಳಿ ಇವರು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಆಯೋಜಿಸಿದ ಗಮಕ-ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಯುವಕ ಮಂಡಲದ ಅಧ್ಯಕ್ಷ ಕಿರಣ್ ಗಂಗೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಉಪನ್ಯಾಸಕ ಸುಜಯೀಂದ್ರ ಹಂದೆ ಗಮಕದ ಹುಟ್ಟು, ಉದ್ದೇಶದ ಸ್ವರೂಪದ ಬಗೆಗೆ ಪ್ರಾಸ್ಥಾವಿಕ ಮಾತುಗಳನ್ನು ಆಡಿದರು. ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಸದಾನಂದ ವೈದ್ಯ ಉಪಸ್ಥಿತರಿದ್ದರು. 

ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ್ ಎಚ್. ಈ. ಸ್ವಾಗತಿಸಿ, ನಟರಾಜ್ ಕಾರ್ಯಕ್ರಮ ನಿರೂಪಿಸಿದರು. ಕೋಟದ ಕಲಾ ಸೌರಭ ಸಾಂಸ್ಕೃತಿಕ ಸಂಘಟನೆಯ ಕಲಾವಿದರಾದ ಸುಜಯೀಂದ್ರ ಹಂದೆ, ಉಪನ್ಯಾಸಕರಾದ ರಾಘವೇಂದ್ರ ತುಂಗ ಮತ್ತು ನಾಗೇಂದ್ರ ಐತಾಳ್ ಅವರು ’ಕುಮಾರವ್ಯಾಸ ಭಾರತದ’ ಕರ್ಣಾಂತರಂಗ ಎಂಬ ಭಾಗವನ್ನು ವಾಚಿಸಿ ವ್ಯಾಖ್ಯಾನಿಸಿದರು. 

ವರದಿ: ನರೇಂದ್ರ ಎಸ್ ಗಂಗೊಳ್ಳಿ.

Leave a Reply

Your email address will not be published. Required fields are marked *

1 × 5 =