ಸರಸ್ವತಿ ವಿದ್ಯಾಲಯದಲ್ಲಿ ಗಾಂಧೀಜಿ ಶಾಸ್ತ್ರೀಜಿ ದಿನಾಚರಣೆ

Call us

Call us

Call us

Call us

ಗಂಗೊಳ್ಳಿ: ಗಾಂಧೀಜಿ ಮತ್ತು ಶಾಸ್ತ್ರೀಜಿಯವರು ಪ್ರತಿಪಾದಿಸಿದ ಮೌಲ್ಯಗಳು ನಮಗೆ ಮುಖ್ಯವಾಗಬೇಕು. ಅವುಗಳ ಅರಿಯುವಿಕೆಗಿಂತ ಆಳವಡಿಕೆ ಪ್ರಮುಖವಾಗಬೇಕು.ಈ ನಿಟ್ಟಿನಲ್ಲಿ ಬೇರೆಯವರನ್ನು ಪ್ರೋತ್ಸಾಹಿಸಬೇಕು ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್ ಕರ್ ಅಭಿಪ್ರಾಯಪಟ್ಟರು.

Call us

Click Here

Click here

Click Here

Call us

Visit Now

Click here

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯವತಿಯಿಂದ ಇಲ್ಲಿನ ರೋಟರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ಕಾರ‍್ಯಕ್ರಮದಲ್ಲಿ ದೀಪ ಬೆಳಗಿಸಿ, ಮಹಾತ್ಮರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಲಾಯಿತು.ಉಪನ್ಯಾಸಕಿ ಕವಿತಾ ಎಮ್ ಸಿ,ಸರಸ್ವತಿ ವಿದ್ಯಾಲಯ ಫ್ರೌಢಶಾಲೆಯ ಉಪಪ್ರಾಂಶುಪಾಲ ವಾಮನದಾಸ ಭಟ್,ಸರಸ್ವತಿ ವಿದ್ಯಾಲಯ ಆಂಗ್ಲ ಮಾದ್ಯಮ ಫ್ರೌಢಶಾಲೆಯ ಮುಖ್ಯೋಪಧ್ಯಾಯ ರಾಘವೇಂದ್ರ ಸೇರುಗಾರ್ ,ದೈಹಿಕ ಶಿಕ್ಷಕ ಸದಾನಂದ ವೈದ್ಯ.ಎನ್‌ಸಿಸಿ ಕಾರ‍್ಯಕ್ರಮ ನಿರ್ವಹಣಾಧಿಕಾರಿ ಆದಿನಾಥ ಕಿಣಿ, ಕಛೇರಿ ಪ್ರಬಂಧಕ ಜಿ. ಸದಾಶಿವ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಅಧ್ಯಾಪಕಿ ಶ್ರೀಲತಾ ಅವರು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ‍್ಯಕ್ರಮ ನಿರ್ವಹಿಸಿದರು.ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ವಂದಿಸಿದರು.

ವರದಿ : ನರೇಂದ್ರ ಎಸ್ ಗಂಗೊಳ್ಳಿ

Leave a Reply

Your email address will not be published. Required fields are marked *

nine − one =