ಸರಸ್ವತಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸುರಕ್ಷತಾ ಕಾರ‍್ಯಕ್ರಮ

Call us

ಗಂಗೊಳ್ಳಿ : ಹದಿವಯಸ್ಸಿನ ವಿದ್ಯಾರ್ಥಿಗಳ ಮನಸ್ಸನ್ನು ಪ್ರಚೋದಿಸುವ೦ತಹ ಅನೇಕ ಆಕರ್ಷಣೆಗಳು ಸುತ್ತಲಿನ ಸಮಾಜದಲ್ಲಿ ಇದ್ದೇ ಇರುತ್ತವೆ. ಆದರೆ ಅಂತಹ ಆಕರ್ಷಣೆಗಳ ನಡುವೆ ನಮ್ಮ ಬೆಳವಣಿಗೆಗೆ ಪೂರಕವಾದುದಷ್ಟನ್ನೇ ಆರಿಸಿಕೊಂಡು ಮುನ್ನಡೆಯುವುದರ ಕಡೆಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಗಮನ ನೀಡಬೇಕು. ಸಮಸ್ಯೆಗಳನ್ನು ದೊಡ್ಡವರೊಡನೆ ಹಂಚಿಕೊಳ್ಳುವ ಮೂಲಕ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಗಂಗೊಳ್ಳಿಯ ಸಹಾಯಕ ಪೋಲಿಸ್ ಉಪನಿರ್ದೇಶಕ ವೆಂಕಟೇಶ್ ಅವರು ಹೇಳಿದರು.

Call us

Call us

ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಅಲ್ಲಿನ ರೋಟರಿ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಸುರಕ್ಷತೆ ಮತ್ತು ಕಾನೂನು ಮಾಹಿತಿ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಪೋಲಿಸ್ ಹೆಡ್ ಕಾನ್‌ಸ್ಟೇಬಲ್ ನಾಗರಾಜ ಅವರು ಮಾತನಾಡಿ ವಿದ್ಯಾರ್ಥಿಗಳು ಅವರ ಕಲಿಕೆಗೆ ಅಡ್ಡಿಯಾಗಿರುವ ಅನಗತ್ಯ ಮೊಬೈಲ್ ಸಹವಾಸದಿಂದ ದೂರವಿರಬೇಕು. ಮತ್ತು ಅಪರಿಚಿತರೊ೦ದಿಗೆ ವ್ಯವಹರಿಸುವಾಗ ಎಚ್ಚರದಿಂದಿರಬೇಕು ಎ೦ದು ಅಭಿಪ್ರಾಯಪಟ್ಟರು.ಆರಕ್ಷಕ ಠಾಣೆಯ ಸಿಬ್ಬ೦ದಿ ಚ೦ದ್ರಶೇಖರ ಉಪಸ್ಥಿತರಿದ್ದರು.

Call us

Call us

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಅತಿಥಿಗಳನ್ನು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಧನ್ಯವಾದ ಅರ್ಪಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ‍್ಯಕ್ರಮ ನಿರ್ವಹಿಸಿದರು.
ವರದಿ ; ನರೇಂದ್ರ ಎಸ್ ಗಂಗೊಳ್ಳಿ.

Leave a Reply

Your email address will not be published. Required fields are marked *

fifteen + 11 =