ಸರಸ್ವತಿ ವಿದ್ಯಾಲಯದಲ್ಲಿ ಸ್ವಚ್ಛ ಮನೆ ಮನ ಕಾರ‍್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಸ್ವಚ್ಛತೆ ಎನ್ನುವುದು ಮೊದಲು ನಮ್ಮ ಮನೆ ಮನಗಳಿಂದಲೇ ಆರಂಭವಾಗಬೇಕು. ಸಮಾಜದ ಸ್ವಚ್ಛತೆಯ ಬಗೆಗೆ ಆಲೋಚಿಸುವ ಮೊದಲು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಿರಂತರವಾಗಿ ಗಮನಹರಿಸಬೇಕು ಆಗಮಾತ್ರ ಸ್ವಚ್ಛ ಭಾರತದ ನಿರ್ಮಾಣ ನಿಜಾರ್ಥದಲ್ಲಿ ಯಶಗೊಳ್ಳಲು ಸಾಧ್ಯ ಎಂದು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹೆಚ್ ಭಾಸ್ಕರ್ ಶೆಟ್ಟಿ ಅಭಿಪ್ರಾಯಪಟ್ಟರು.

Call us

Call us

Call us

ಅವರು ಇತ್ತೀಚೆಗೆ ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ವಚ್ಛ ಮನೆ ಮನ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಮನೆಗಳಲ್ಲಿನ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಕಡೆಗೆ ಹೆಚ್ಚಿನ ಗಮನ ನೀಡುವಂತೆ ಅವರು ಹೇಳಿದರು.

Call us

Call us

ವಿದ್ಯಾರ್ಥಿಗಳಾದ ಮಂಜುನಾಥ, ಕೃಷ್ಣ, ಸೃಷ್ಟಿ ಮತ್ತು ಗೌತಮಿ ಸ್ವಚ್ಛತೆಯ ಬಗೆಗೆ ತಮ್ಮ ವಿಚಾರಗಳನ್ನು ಮಂಡಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ‍್ಯಕ್ರಮ ಆಯೋಜಿಸಿದ್ದರು.ದೀಕ್ಷಾ ಪ್ರಾರ್ಥಿಸಿದರು. ವಿಜೇತ್ ಸ್ವಾಗತಿಸಿದರು. ಭರತ್ ಕಾರ‍್ಯಕ್ರಮ ನಿರೂಪಿಸಿದರು. ರೋಶನ್ ವಂದಿಸಿದರು.

Leave a Reply

Your email address will not be published. Required fields are marked *

eighteen + ten =