ಸರ್ಜಿಕಲ್ ದಾಳಿ ನೇತೃತ್ವ ವಹಿಸಿದ ಯೋಧನಿಗೆ ಸನ್ಮಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ರಿಕ್ಷಾ ಚಾಲಕರ ಮತ್ತು ಮಾಲಕರ ಆಶ್ರಯದಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನ ದೀಪೋತ್ಸವ ನಿಮಿತ್ತ ನಡೆದ ಕಾರ‍್ಯಕ್ರಮದಲ್ಲಿ ವಿಶೇಷ ಚೇತನರಿಗೆ ಸಹಾಯಧನ, ವಿದ್ಯಾರ್ಥಿ ವೇತನ, ಶಾಲಾ ಚಿಣ್ಣರಿಗೆ ಸ್ಕೂಲ್ ಬ್ಯಾಗ್, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿ ನೀರಜ್‌ಗೆ ಸಹಾಯಧನ ವಿತರಣೆ ಮಾಡಲಾಯಿತು.

Call us

Call us

ರಾಮಕ್ಷತ್ರಿಯ ಮಂಡಳಿ ಅಧ್ಯಕ್ಷ ಕೆ.ಅಜಯ ಹವ್ದಾರ್ ಉದ್ಘಾಟಿಸಿದರು. ಯುವ ಉದ್ಯಮಿ ಅಭಿನಂದನ್ ಎ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಕೆ.ಪ್ರದೀಪ್ ಕುಮಾರ್ ಶೆಟ್ಟಿ, ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಅಧ್ಯಕ್ಷ ವಿಠಲ ಖಾರ್ವಿ ಇದ್ದರು.

ಕಾರ್ಗಿಲ್ ಯುದ್ಧ ಹಾಗೂ ೨೦೧೫ರಲ್ಲಿ ಇಂಡೋ ಮಾಯನ್ಮಾರ್ ಸರ್ಜಿಕಲ್ ದಾಳಿ ನೇತೃತ್ವ ವಹಿಸಿದ ಕುಂದಾಪುರ ಯೋಧ ಕಿಶನ್ ಕುಮಾರ್ ಡಿ.ಕೆ. ಅವರ ಸನ್ಮಾನಿಸಲಾಯಿತು. ವೆಂಕಟೇಶ್ ಸನ್ಮಾನ ಪತ್ರ ವಾಚಿಸಿದರು.ಕಾರ‍್ಯದರ್ಶಿ ನಾಗರಾಜ್ ಖಾರ್ವಿ ವರದಿ ಮಂಡಿಸಿದರು. ದೀಪಾ ವೆಂಕಟೇಶ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸ್ವಪ್ನಾ ಪ್ರಕಾಶ್ ನಿರೂಪಿಸಿದರು.

Call us

Call us

Leave a Reply

Your email address will not be published. Required fields are marked *

2 + three =