ಸರ್ದಾರ್ ವಲ್ಲಭಾಯ್ ಪಟೇಲರ ಜನ್ಮ ದಿನಾಚರಣೆ, ಕ್ವಿಜ್

Call us

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಅ.೩೧ರಂದು ವಡೇರಹೋಬಳಿಯ ಸರೋಜಿನಿ ಮಧುಸೂಧನ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸರ್ದಾರ್ ವಲ್ಲಭಾಯ್ ಪಟೇಲರ ಜನ್ಮ ದಿನಾಚರಣೆಯ ಅಂಗವಾಗಿ ರೋಟರಿ ಕ್ವಿಜ್ ನಡೆಸಲಾಯಿತು

Call us

Call us

ಸರ್ದಾರ್ ವಲ್ಲಭಾಯ್ ಪಟೇಲರ ಕುರಿತಾದ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ಸವಿತಾ ಪ್ರಥಮ ಸ್ಥಾನ ಪಡೆದರು. 10ನೇ ತರಗತಿಯ ಮೇಘನಾ, 8ನೇ ತರಗತಿಯ ಸ್ವಾತಿ ದ್ವಿತಿಯ ಸ್ಥಾನ ಪಡೆದುಕೊಂಡರು. ತೃತೀಯ ಸ್ಥಾನವನ್ನು 10ನೇ ತರಗತಿಯ ಪೂರ್ಣಶ್ರೀ, ಶ್ವೇತಾ, ಅಂಜು, ಸುಮ, ಅನುಪಮ, 9ನೇ ತರಗತಿಯ ಶ್ವೇತಾ, ಚೈತನ್ಯ, ಶಾಲಿನಿ ಪಡೆದುಕೊಂಡರು.

ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಬಹುಮಾನ ವಿತರಿಸಿ ಮಾತನಾಡಿ ಈ ದೇಶ ಕಂಡ ಅಪ್ರತಿಮ ನಾಯಕ ಸರ್ದಾರ್ ವಲ್ಲಭಾಯ್ ಪಟೇಲರು. ಅವರ ಅನನ್ಯ ದೇಶ ಭಕ್ತಿ, ನಾವೆಲ್ಲರೂ ಒಂದೇ ಎನ್ನುವ ಏಕತೆಯ ಭಾವವನ್ನು ದೇಶದಲ್ಲಿ ಜಾಗೃತಗೊಳಿಸಿ ನಮ್ಮೆಲ್ಲರ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅವರಂತೆ ದೇಶದ ಉಜ್ವಲ ಭವಿಷ್ಯಕ್ಕೆ ನಿವೆಲ್ಲರೂ ಕೊಡುಗೆಗಳಾಗಿ ಎಂದು ಹಾರೈಸಿದರು. ಸದಸ್ಯರಾದ ಮುತ್ತಯ್ಯ ಶೆಟ್ಟಿ ವಿದ್ಯಾರ್ಥಿಗಳಿಗೆ ಎಕತೆಯ ಪ್ರತಿಜ್ಞಾ ವಿಧಿ ಭೋದಿಸಿದರು.

Call us

Call us

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಧ್ಯಾಯ ಚಂದ್ರಶೇಖರ ಶೆಟ್ಟಿ, ಇಂಟರ‍್ಯಾಕ್ಟ್ ಕ್ಲಬ್ ಸಂಯೋಜಕ ಮೀರಾ ಸಾಹೇಬ್, ಶಿಕ್ಷಕರಾದ ನಾಗರತ್ನ ಶೇಟ್, ನಾರಾಯಣ ಶೆಟ್ಟಿ, ತೇಜಸ್ವಿನಿ, ಮಮತಾ, ಹೇಮಾವತಿ, ಮಂಜುನಾಥ ಹೆಬ್ಬಾರ್, ಚೆನ್ನಯ್ಯ ಯು, ನಿವೇದಿತಾ, ರೋಟರಿ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

4 × 1 =