ಮೂಡುಬಿದರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನದ ವಿಶೇಷಕ್ಕೆ ಇನ್ನೊಂದು ಅಚ್ಚರಿ ಸೇರ್ಪಡೆಯಾಗಿತ್ತು. ಅದು ಕೋತಿರಾಜ್ ಅವರ ಆಗಮನ. ಕೋತಿರಾಜ್ ಎಂದೇ ಪ್ರಖ್ಯಾತರಾದ ಚಿತ್ರದುರ್ಗದ ಜ್ಯೋತಿರಾಜ್ ಆಲಿಯಾಸ್ ಕೋತಿರಾಜ್ ಆಳ್ವಾಸ್ ಆಯುರ್ವೇದ ಕಾಲೇಜಿನ ಮುಗಿಲೆತ್ತರದ ಕಟ್ಟಡವನ್ನು ಏರುತ್ತಾ ಹೋದಾಗ ಸೇರಿದ್ದ ನೂರಾರು ಜನ ಒಮ್ಮೆಗೇ ಚಕಿತಗೊಂಡರು.
ಕೋತಿರಾಜ್ಗೆ ೨೭ ಮಂದಿ ಶಿಷ್ಯರಿದ್ದಾರಂತೆ. ಅವರಲ್ಲಿ ಹಲವರು ಮಿಲಿಟರಿ ಮತ್ತು ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಇವರ ಜತೆ ಇನ್ನೂ ಇಬ್ಬರು ಮಕ್ಕಳು ಆಗಮಿಸಿದ್ದಾರೆ. ಅವರಿಬ್ಬರೂ ಕೋತಿರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಕೇವಲ ಆಳ್ವಾಸ್ನ ಸಂಸ್ಕೃತಿ ಉತ್ಸವವಲ್ಲ. ಇದು ಕರ್ನಾಟಕದ ಸಾಂಸ್ಕೃತಿಕ ಹಬ್ಬ ಎಂದು ಬಣ್ಣಿಸಿದರು ಕೋತಿರಾಜ್.