ಸಾಂಪ್ರಾದಾಯಿಕ ಸಸ್ಯ ಪದಾರ್ಥ ಆರೋಗ್ಯಕ್ಕೆ ಜೀವನಾಡಿ: ಡಾ. ರಾಜೇಶ್ ಬಾಯರಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪಾಶ್ಚಾಮಾತ್ಯ ಆಹಾರ ಪದ್ದತಿಯ ಅತೀಯಾದ ಆಕ್ರಮಣದಿಂದಾಗಿ ನಮ್ಮ ಪರಂಪರಾಗತ ಮತ್ತು ಸಾಂಪ್ರಾದಾಯಿಕ ಆಹಾರ ಶೈಲಿಯಲ್ಲಿ ಗಣನೀಯ ಬದಲಾವಣೆ ಕಂಡು ಬಿರುತ್ತಿರುವುದು ಬೇಸರದ ಸಂಗತಿಯಾಗಿದೆ. ಇದಕ್ಕಾಗಿ ದೇಶಿಯ ಆಹಾರ ಪದ್ಧತಿಯ ಜಾಗ್ರತ ಕಾರ್ಯಕ್ರಮ ಅತ್ಯಂತ ಅನಿವಾರ್ಯ ಮತ್ತು ಉಪಯುಕ್ತ ಎಂದು ಡಾ. ರಾಜೇಶ್ ಬಾಯರಿ ಹೇಳಿದರು.

Call us

Call us

Visit Now

ಗುರುಕುಲ ವಿದ್ಯಾಸಂಸ್ಥೆಯ ೭ನೇ ವರ್ಷ ಆಯೋಜಿಸಿದ್ದ ಸಸ್ಯಾಮೃತ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ದೇಶಿಯ ಆಹಾರ ಪದಾರ್ಥಗಳಲ್ಲಿ ಸಸ್ಯಗಳು ಎಲೆಗಳು ಬೇರುಗಳು ಮುಂತಾದವುಗಳು ಪ್ರದಾನ ಪಾತ್ರವನ್ನು ವಹಿಸುತ್ತಿವೆ. ನಮ್ಮ ಮನೆಯಂಗಳದಲ್ಲಿ ಕಾಣುವ ಅನೇಕ ಔಷಧಿಯುಕ್ತ ಮತ್ತು ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ ವಿಶಿಷ್ಟವಾದ ಪಾತ್ರವನ್ನು ನಿರ್ವಹಿಸುತ್ತಿದೆ. ಪ್ರತಿಯೊಂದು ರೋಗಕ್ಕೂ ಅದಕ್ಕೆ ಸಂಬಂಧಪಟ್ಟ ಸಸ್ಯ ನೇರ ಮತ್ತು ಪರೋಕ್ಷ ನಿರ್ಮೂಲನಾ ಗುಣವನ್ನು ಹೊಂದಿದೆ. ಪ್ರತಿನಿತ್ಯವೂ ನಾವು ಸಸ್ಯಗಳಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕಾರಿಯಾಗಿದೆ ಎಂದರು.

Click here

Call us

Call us

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗುರುಕುಲ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ ಸಾಂಪ್ರಾದಾಯಿಕ ಆಹಾರ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳುವುದರ ಮೂಲಕ ನಾವು ಆರೋಗ್ಯವಾಗಿರಬಹುದು ಮತ್ತು ಸಸ್ಯ ಪ್ರಪಂಚವನ್ನು ಬೆಳೆಸಿ ಪೋಷಿಸಬಹುದೆಂದು ನುಡಿದರು. ಬಾಂಡ್ಯ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಅನುಪಮ ಎಸ್. ಶೆಟ್ಟಿ ಸ್ವಾಗತಿಸಿದವರು.

ಸಭಾ ಕಾರ್ಯಕ್ರಮ ಸಂಪನ್ನಗೊಂಡ ನಂತರ ಆಗಮಿಸಿದ ಬಂಧುಗಳಿಗೆ ಪಾಲಕರಿಗೆ ಸುಮಾರು 32 ಬಗೆಯ ಸಸ್ಯ ಪದಾರ್ಥಗಳನ್ನು ತಯಾರಿಸಿ ಬಡಿಸಲಾಯಿತು. ಅಲ್ಲದೇ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರೂ ಸಸ್ಯಾಮೃತ ಕಾರ್ಯಕ್ರಮ ಒಂದು ಅರ್ಥಪೂರ್ಣ ಸಂದೇಶವನ್ನು ನಮಗೆ ಕೊಟ್ಟಿದೆ ಎಂದು ಅಭಿಪ್ರಾಯ ಪಟ್ಟರು. ಈ ಕಾರ್ಯಕ್ರಮದ ರುವಾರಿಗಳಾದ ಗುರುಕುಲ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಸುಬಾಶ್ಚಂದ್ರ ಶೆಟ್ಟಿಯವರು ಮುಂದಿನ ದಿನಗಳಲ್ಲಿ ಆಹಾರ ಪದ್ಧತಿ ಮತ್ತು ಸಸ್ಯ ಪದಾರ್ಥಗಳ ಮಹತ್ವತೆಯ ಬಗ್ಗೆ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ಕೈಗೊಳ್ಳಲು ಯೋಚಿಸಿದ್ದೇವೆಂದು ನುಡಿದರು.

ಮುರಿಯ ಹಣ್ಣಿನ ಕಾಷಾಯ, ಅಪ್ಪೆಹುಳಿ, ಹಲಸಿನ ಬೀಜದ ಹೋಳಿಗೆ, ಗೋವೆ ಕೆಸವಿನ ಸಾಸಿವೆ, ಬಿಲ್ವ ಪತ್ರೆ ತಂಬುಳಿ, ಪತ್ರೋಡೆ, ಕಾಡಬದನೆ ಚಟ್ನಿ ಇವೆ ಮುಂತಾದ 32 ಬಗೆಯ ಸಾಂಪ್ರಾದಾಯಿಕ ಸಸ್ಯ ಪದಾರ್ಥಗಳು ತಯಾರಿಸಲಾಯಿತು.

 

Leave a Reply

Your email address will not be published. Required fields are marked *

3 + six =