ಸಾಕ್ಷರತೆಯಷ್ಟೇ ಏಡ್ಸ್ ಸೋಂಕಿನಲ್ಲೂ ಉಡುಪಿ ಮೊದಲು: ಡಾ. ಅಶೋಕ್

Call us

Call us

ಕುಂದಾಪುರ ವೆಂಕಟರಮಣ ವಿದ್ಯಾಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ

Call us

Call us

Call us

ಕುಂದಾಪುರ: ಸಾಕ್ಷರತೆಯಲ್ಲಿ ಮೊದಲಿರುವ ಉಡುಪಿ ಜಿಲ್ಲೆ ಏಡ್ಸ್ ಸೋಂಕಿನ ಪ್ರಮಾಣದಲ್ಲಿಯೂ ಮೊದಲ ಸ್ಥಾನದಲ್ಲಿರುವುದು ಆತಂಕಕಾರಿ. ಈ ಪೈಕಿ ಯುವಜನರ ಪಾಲು ಹೆಚ್ಚಿರುವುದು ಚಿಂತೆಗೀಡು ಮಾಡಿದೆ. ಯುವಸಮೂಹದಲ್ಲಿ ಜಾಗೃತಿ ಮೂಡಿಸುವುದೊಂದೇ ಸದ್ಯದ ಮಾರ್ಗ ಎಂದು ಉಡುಪಿಯ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ಅಶೋಕ್ ಹೇಳಿದರು.

ಅವರು ಕುಂದಾಪುರದ ವೆಂಕಟರಮಣ ವಿದ್ಯಾ ಸಂಸ್ಥೆ, ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಸಹಭಾಗಿತ್ವದಲ್ಲಿ ನಡೆದ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನವಿತ್ತರು. ಕುಂದಾಪುರದ 2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಎ. ಬಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೆಂಕಟರಮಣ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ರಾಧಾಕೃಷ್ಣ ಶೆಣೈ ಅತಿಥಿಗಳಾಗಿ ಭಾಗವಹಿಸಿದ್ದರು. ಸಹಾಯಕ ಸರಕಾರಿ ಅಭಿಯೋಜಕ ಸಂದೇಶ್ ಭಂಡಾರಿ, ತಾಲೂಕು ವೈದ್ಯಾಧಿಕಾರಿ ಅಜಯ ಭಂಡಾರ್‌ಕಾರ್, ವೆಂಕಟರಮಣ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಗಣೇಶ ನಾಯಕ್, ರೂಪಾ ಶೆಣೈ, ಜಯಶೀಲಾ ನಾಯಕ್ ಉಪಸ್ಥಿತರಿದ್ದರು. ಮಹಾಬಲೇಶ್ವರ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರವೀಂದ್ರ ಪೂಜಾರಿ ನಿರೂಪಿಸಿದರು. ಆಡಳಿತಾಧಿಕಾರಿ ಪಿ. ಶ್ರೀಪತಿ ಹೇರ್ಳೆ ವಂದಿಸಿದರು.

Leave a Reply

Your email address will not be published. Required fields are marked *

2 × three =