ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸಾಧಕ ಶಿಕ್ಷಕರನ್ನು ಗೌರವಿಸಲಾಯಿತು.
ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೆ.ವಿ.ಕೆ ಐತಾಳ್, ಕುಂದಾಪುರದ ಬಿ. ಆರ್. ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಧ್ಯಾಯಿನಿ ಶಶಿಕಲಾ ಬಿಜೂರ್, ವಡೇರಹೋಬಳಿಯ ಸ. ಹಿ. ಪ್ರಾ. ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಸುಗುಣ ಎಂ. ವಿ ಅವರ ಸೇವೆಯನ್ನು ಸ್ಮರಿಸಿ ಸಂಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ಶಶಿಕಲಾ ಬಿಜೂರ್ ಅವರು ಮಾತನಾಡಿ ಆಧ್ಯಾತ್ಮಿಕ ತಳಹದಿಯ ಮೇಲೆ ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ಮುನ್ನಡೆಯುವ ಪ್ರೇರಣೆ ವಿದ್ಯಾರ್ಥಿ ಜೀವನದಲ್ಲೆ ದೊರೆತಾಗ ಶಾಂತಿ ನೆಮ್ಮದಿಯ ಯಶಸ್ಸಿನ ಜೀವನ ನಡೆಸಲು ಸಾಧ್ಯ, ಪ್ರಕೃತಿ ಗುರುವಾಗಿ ನಮಗೆ ಎಲ್ಲವನ್ನು ಕಲಿಸುತ್ತಿದೆ ಎಂದು ಕೃತಜ್ಞತೆ ಅರ್ಪಿಸಿದರು.
ಶಿಕ್ಷಕರಾಗಿ ಸೇವೆ ಸಲ್ಲಿಸಿದ ರೋಟರಿ ಕ್ಲಬ್ ಕುಂದಾಪುರದ ಸದಸ್ಯರಾದ ಎಚ್. ವಿ. ನರಸಿಂಹ ಮೂರ್ತಿ, ಕೆ.ವಿ.ನಾಯಕ್, ಗೋಪಾಲ ಶೆಟ್ಟಿ, ಶಶಿಧರ ಶೆಟ್ಟಿ ಸಾಲಗದ್ದೆ, ಪ್ರಕಾಶ್ಚಂದ್ರ ಶೆಟ್ಟಿ ಮತ್ತು ಆನ್ಸ್ ಕ್ಲಬ್ ಸದಸ್ಯರಾದ ಪಾರ್ವತಿ ಕೊತ್ವಾಲ್, ಬಿಂದು ನಾಯರ್, ಆಶಾ ಕೆ. ವಿ. ನಾಯಕ್, ಭಾರತಿ ಪಿ. ಶೆಟ್ಟಿ, ಸ್ಮಿತಾ ಶೆಟ್ಟಿ, ಚೇತನಾ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಮಾಜಿ ಜಿಲ್ಲಾ ಗವರ್ನರ್ ಎ. ಎಸ್. ಎನ್. ಹೆಬ್ಬಾರ್, ನಿವೃತ್ತ ಪ್ರಾಧ್ಯಾಪಕ ಎಚ್. ವಿ. ನರಸಿಂಹ ಮೂರ್ತಿ, ಪರಿಸರ ತಜ್ಞ ಡಾ. ಎಚ್. ಎಸ್. ಮಲ್ಲಿ ಶಿಕ್ಷಕರನ್ನು ಗೌರವಿಸಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಆನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಪಿ. ಶೆಟ್ಟಿ, ರೋಟರಿ ಸದಸ್ಯರಾದ ದಾಮೋದರ ಪೈ, ಶ್ರೀಧರ ಸುವರ್ಣ ಸನ್ಮಾನಿತರನ್ನು ಪರಿಚಯಿಸಿದರು. ಆನ್ಸ್ ಕ್ಲಬ್ ಕಾರ್ಯದರ್ಶಿ ಸುನೇತ್ರ ಸತೀಶ್ ಕೋಟ್ಯಾನ್, ರೋಟರಿ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ರೋಟರಿ ಹಿರಿಯ ಸದಸ್ಯರಾದ ಮುತ್ತಯ್ಯ ಶೆಟ್ಟಿ ವಂದಿಸಿದರು.