ಸಾಮಾಜಿಕ ಕಾರ್ಯಕರ್ತ ಸಚ್ಚಿದಾನಂದ ಶೆಟ್ಟಿ ನಿಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಾಮಾಜಿಕ ಕಾರ್ಯಕರ್ತ, ವಿಜಯಾ ಬ್ಯಾಂಕ್‌ನ ನಿವೃತ್ತ ಚೀಫ್ ಮ್ಯಾನೇಜರ್ ಸಚ್ಚಿದಾನಂದ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಳ ದಿನಗಳ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳುತ್ತಿದ್ದ ಅವರಿಗೆ ಅನಾರೋಗ್ಯ ಕಾಣಿಸಿಕೊಂಡು ಮುಂಬೈಯ ಮಗಳ ನಿವಾಸಕ್ಕೆ ಹಿಂದಿರುಗಿ ವಿಶ್ರಾಂತಿಯಲ್ಲಿದ್ದರು. ಮಾ.3ರಂದು ಹೃದಯಾಘಾತಕ್ಕೊಳ್ಳಗಾಗಿ ನಿಧನಹೊಂದಿದ್ದಾರೆ.

Call us

Call us

Call us

ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿಯಾಗಿ, ಕುಂದಾಪುರ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಕುಂದಾಪುರ ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷರಾಗಿ, ಹುಬ್ಬಳ್ಳಿ ಝೋನ್ ರೈಲ್ವೆ ಬೋರ್ಡ್ ಸದಸ್ಯರಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಶೀಲಾ ಶೆಟ್ಟಿ, ಮಕ್ಕಳಾದ ದೀಪಕ್ ಶೆಟ್ಟಿ, ರೂಪಾ ಶೆಟ್ಟಿ, ಡಾ. ಸುದೀಪ್ ಶೆಟ್ಟಿ, ಶೀತಲ್ ಶೆಟ್ಟಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Call us

Call us

Leave a Reply

Your email address will not be published. Required fields are marked *

5 − three =