ಸಾಲಿಗ್ರಾಮ ಮೊಗವೀರ ಸಂಘಟನೆಯಿಂದ ಸ್ಮಶಾನ ಸ್ವಚ್ಛತಾ ಆಂದೋಲನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಸಾಲಿಗ್ರಾಮ ಘಟಕ ಮತ್ತು ಮಹಿಳಾ ಸಂಘಟನೆ ಸಾಲಿಗ್ರಾಮ ಇವರ ಆಶ್ರಯದಲ್ಲಿ, ಪಟ್ಟಣ ಪಂಚಾಯಿತಿ ಸಾಲಿಗ್ರಾಮ ಇವರ ಸಹಕಾರದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ಮಶಾನಗಳ ಸ್ವಚ್ಛತಾ ಆಂದೋಲನವು ಭಾನುವಾರ ನಡೆಯಿತು. ತೋಡ್ಕಟ್ಟು-ಪಾರಂಪಳ್ಳಿ ಸ್ಮಶಾನ ಸ್ವಚ್ಛತೆಯೊಂದಿಗೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಚಾಲನೆ ನೀಡಿದರು.

Call us

Call us

ಇದೇ ಸಂದರ್ಭ ಸಂಘಟನೆ ಅಧ್ಯಕ್ಷ ಸತೀಶ್ ಮರಕಾಲ ಮಾತನಾಡಿ, ರಕ್ತದಾನ ಶಿಬಿರಗಳ ಮೂಲಕ ಗುರುತಿಸಿಕೊಂಡಿದ್ದ ಮೊಗವೀರ ಸಂಘಟನೆಯು ಇನ್ನುಳಿದ ಸಮಾಜ ಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ನಾಡೋಜ ಡಾ.ಜಿ.ಶಂಕರ್ ಅವರ ಪ್ರೇರಣೆಯ ಮೇರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ರೂಪಿಸುವ ಉದ್ದೇಶವಿರಿಸಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾಧ್ಯಕ್ಷರುಗಳಾದ ಜಯ ಸಿ ಕೋಟ್ಯಾನ್, ಎಂ.ಎಸ್.ಸಂಜೀವ, ಸತೀಶ್ ಎಂ.ನಾಯ್ಕ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಘವೇಂದ್ರ ಸುವರ್ಣ ಬೈಕಾಡಿ, ಉದ್ಯಮಿಗಳಾದ ಅರುಣ್ ಕುಂದರ್ ಗಿರಿಮುತ್ತು, ದಯಾನಂದ ಸಾಲ್ಯಾನ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಪ್ರತಿಪಕ್ಷದ ನಾಯಕ ಶ್ರೀನಿವಾಸ ಅಮೀನ್, ಸದಸ್ಯರಾದ ಕರುಣಾಕರ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಆರೋಗ್ಯ ಸಹಾಯಕಿ ಮಮತಾ, ಕೋಟೇಶ್ವರ ಘಟಕದ ಅಧ್ಯಕ್ಷ ಅಶೋಕ್ ತೆಕ್ಕಟ್ಟೆ, ಹಾಲಾಡಿ ಘಟಕದ ಜಗದೀಶ, ಕುಂದಾಪುರದ ದಿವಾಕರ ಮೆಂಡನ್, ಸುಧಾಕರ ಕಾಂಚನ್, ಸಾಲಿಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರ ಮರಕಾಲ, ಗೌರವಾಧ್ಯಕ್ಷ ಶೇಖರ ಮರಕಾಲ, ಮಹಿಳಾ ಸಂಘಟನೆಯ ಅಧ್ಯಕ್ಷೆ ಗೀತಾ ಭಾಸ್ಕರ್, ಕಾರ್ಯದರ್ಶಿ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.

Call us

Call us

Leave a Reply

Your email address will not be published. Required fields are marked *

sixteen − five =