ಸಾಹಿತಿ ಬಿ.ವಿ. ಕೆದಿಲಾಯ ಅವರಿಗೆ ಎಂ. ಗೋಪಾಲಕೃಷ್ಣ ಅಡಿಗ ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಡಿಗರು ಕೇವಲ ಕನ್ನಡದ ಕವಿಯಲ್ಲ ವಿಶ್ವದ ಶ್ರೇಷ್ಟ ಕವಿಗಳಲ್ಲಿ ಒರ್ವರು. ಅವರ ಕಾವ್ಯದಲ್ಲಿ ಎಲ್ಲವೂ ಸರಳ. ಅವು ಆಳವಾದ ಬೌದ್ಧಿಕ ಅಂಶಗಳನ್ನು ಒಳಗೊಂಡಿದೆ. ಹಾಗೂ ಕಾವ್ಯಗಳಲ್ಲಿ ಅಗಾಧ ಧ್ವನಿ ಪೂರ್ಣತೆಯನ್ನು ಒಳಗೊಂಡಿದೆ ಎಂದು ಸಾಹಿತಿ ಬಿ.ವಿ. ಕೆದಿಲಾಯ ಬೆಂಗಳೂರು ಹೇಳಿದರು.

ಕುಂದ ಅಧ್ಯಯನ ಕೇಂದ್ರ ಹಾಗೂ ಸುವಿಚಾರ ಬಳಗ ಟ್ರಸ್ಟ್ ಆಶ್ರಯದಲ್ಲಿ ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ರವಿವಾರ ಜರುಗಿದ ಎಂ. ಗೋಪಾಲಕೃಷ್ಣ ಅಡಿಗ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಎಂ.ಗೋಪಾಲಕೃಷ್ಣ ಅಡಿಗ ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಅಡಿಗರು ಕಾವ್ಯವನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡಿದ್ದರು. ಅವರ ಕಾವ್ಯದ ಸಮಗ್ರ ಮೌಲ್ಯಮಾಪನ ನಡೆಯಲಿಲ್ಲ. ಜಾಗತೀಕರಣಕ್ಕಿಂತ ಮೊದಲು ಆ ಕುರಿತು ದಾರ್ಶನಿಕ ಚಿಂತನೆ ನಡೆಸಿದ್ದ ಅಡಿಗರ ಕಾವ್ಯದ ಮೂಲದ್ರವ್ಯದ ಶೋಧನೆ ನಡೆಯಬೇಕು ಎಂದರು.

ಹಿರಿಯ ಪತ್ರಕರ್ತ ಜಾನ್ ಡಿ‘ಸೋಜಾ ರಾಮಕೃಷ್ಣ ಶೇರುಗಾರ ಅಧ್ಯಕ್ಷತೆ ವಹಿಸಿದ್ದರು, ಹಿರಿಯ ಪತ್ರಕರ್ತ ಜಾನ್ ಡಿ‘ಸೋಜಾ, ಜಾನಪದ ತಜ್ಞರಾದ ಪ್ರೋ.ಎ.ವಿ. ನಾವಡ ಮತ್ತು ಡಾ| ಗಾಯತ್ರೀ ನಾವಡ ಉಪಸ್ಥಿತರಿದ್ದರು. ಕೇಂದ್ರದ ಗೌರವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ್ಷ ಪ್ರೊ.ನಿತ್ಯಾನಂದ ಶೆಟ್ಟಿ, ಬಿ. ಎಂ. ರಮೇಶ ರಾವ್ ಉಪಸ್ಥಿತರಿದ್ದರು. ಸಂಚಾಲಕ ವಿ. ಎಚ್. ನಾಯಕ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಲಲಿತಾ ನಾಯ್ಕ್ ಮತ್ತು ಭಾರತಿ ಮಂಜುನಾಥ ನಿರೂಪಿಸಿದರು. ಶಿಕ್ಷಕ ಕೇಶವ ನಾಯ್ಕ್ ವಂದಿಸಿದರು.

Leave a Reply

Your email address will not be published. Required fields are marked *

4 × four =