ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನುಕೆರೆ ಗ್ರಾಮದ ಶಾರದಾ ಅಚ್ಯುತ್ ಗಾಣಿಗ ಇವರ ಮನೆಗೆ ತಡ ರಾತ್ರಿ ಬಡಿದ ಭಾರೀ ಸಿಡಿಲಿಗೆ ಮನೆ ಸಂಪೂರ್ಣ ಹಾನಿಯಾಗಿ ಜಖಂಗೊಂಡ ಘಟನೆ ನಡೆದಿದೆ. ಮಧ್ಯರಾತ್ರಿ ಒಂದೇ ಸಮನೆ ಸುರಿದ ಗಾಳಿ ಮಳೆಗೆ ಏಕಾಎಕಿ ಬಡಿದ ಸಿಡಿಲಿನ ಹೊಡೆತಕ್ಕೆ ಮನೆಯ ಗೋಡೆ, ಮೇಲ್ಚಾವಣಿ, ವಿದ್ಯುತ್ ಉಪಕರಣಗಳು ಸೇರಿದಂತೆ ವಿದ್ಯುತ್ ಲೈನ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಸುಮಾರು 5 ಲಕ್ಷ ಹೆಚ್ಚು ಹಾನಿ ಎಂದು ಅಂದಾಜಿಸಲಾಗಿದೆ.
ಘಟನೆ ವೇಳೆ ಮನೆಯ ಯಜಮಾನತಿ ವಯೋವೃದ್ಧೆ ಶಾರದಾ ಗಾಣಿಗ (80) ನಿದ್ದೆಯ ಮಂಪರಿನಲ್ಲಿದ್ದು ಆಘಾತಕೊಳ್ಳಗಾಗಿದ್ದು ಅದೃಷ್ಟವಶಾತ್ ಕುಟುಂಬ ಸದಸ್ಯರು ಯಾವುದೇ ಪ್ರಾಣಾಪಯವಿಲ್ಲದೇ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಸಂಜೀವ ದೇವಾಡಿಗ, ಪಿಡಿಒ ಸುನೀಲ್, ವಿಎ ದೀಪಿಕಾ ಶೆಟ್ಟಿ, ಗಾಣಿಗ ಸಮಾಜದ ಮುಖಂಡರಾದ ನಾಗರಾಜ ಗಾಣಿಗ ಸಾಲಿಗ್ರಾಮ, ಅರುಣ್ ಗಾಣಿಗ ತೆಕ್ಕಟ್ಟೆ ಬೇಟಿ ನೀಡಿ ಹಾನಿ ಪರಿಶೀಲಿಸಿದರು.