ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ವಿಶೇಷಚೇತನರಿಗೆ ಎಪಿಡಿ ಸಂಸ್ಥೆಯ ಜೀವನೋಪಾಯ ಕಾರ್ಯಕ್ರಮದ ದಿನಸಿ ಕಿಟ್ ವಿತರಣೆ ಮತ್ತು ಅರಿವು ಕಾರ್ಯಕ್ರಮ ಇಲ್ಲಿನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಕಿಟ್ ವಿತರಿಸಿ ಎಪಿಡಿ ಸಂಸ್ಥೆಯ ನೋಡಲ್ ಅಧಿಕಾರಿ ಹರೀಶ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆ ಸುಮಾರು 62 ವರ್ಷದಿಂದ ವಿಶೇಷ ಚೇತನರಿಗೆ ಶಿಕ್ಷಣ, ತರಬೇತಿ, ವೈದ್ಯಕೀಯ ಪುನಶ್ಚೇತನ ಹಾಗೂ ಉದ್ಯೋಗ ಸೌಲಭ್ಯವನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತರು ಮತ್ತು ತಾಲೂಕಿನ ಎಮ್.ಆರ್.ಡಬ್ಲೂ ಮಂಜುನಾಥ ಹೆಬ್ಬಾರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ ಕುಲಾಲ್, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ, ವಿ.ಆರ್.ಡಬ್ಲೂ ಕಾವೇರಿ ಪ್ರಸಾದ್ ಮತ್ತು ವಿಶೇಷ ಚೇತನರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿ.ಆರ್.ಡಬ್ಲೂ ಆಕಾಶ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವಂದಿಸಿದರು.