ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಯೋಗ ಬೃಹ್ಮ ಶ್ರೀ ಋಷಿ ಪ್ರಭಾಕರ ಗುರೂಜಿಯವರ ಆಶೀರ್ವಾದದೊಂದಿಗೆ, ಯೋಗ ಶಿಕ್ಷಕರಾದ ಆಚಾರ್ಯ ಎಮ್ ಗೋಪಾಲಕೃಷ್ಣ ಭಟ್ ಗುರೂಜಿ ಶಿವಮೊಗ್ಗ ಮತ್ತು ಆಚಾರ್ಯ ಕೇಶವ ಗುರೂಜಿ ಬೆಳ್ನಿ ಇವರ ಮಾರ್ಗದರ್ಶನದಲ್ಲಿ ಸಿದ್ದ ಸಮಾಧಿ ಯೋಗ ಬೈಂದೂರು ವಲಯದ ಧ್ಯಾನಿಗಳಿಂದ ಕೊಲ್ಲೂರಿಗೆ ಪಾದಯಾತ್ರೆ ನಡೆಸಿದರು
ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಅರ್ಚಕರು ಅರ್ಚನೆ ಮಂಗಳಾರತಿ ಮಾಡುವುದರೊಂದಿಗೆ ಪಾದಯಾತ್ರೆಗೆ ಚಾಲನೆ ನೀಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಪಾದಯಾತ್ರೆಗೆ ಸಾಥ್ ನೀಡಿದರು.
ಬೆಳಿಗ್ಗೆ 9ಗಂಟೆಗೆ ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಭಜನೆ ಸಂಕೀರ್ತನೆಗಳು ನಡೆದೆವು. ಅಲ್ಲಿಯೇ ಯಾತ್ರಿಗಳು ಬೆಳಿಗ್ಗೆಯ ಉಪಹಾರವನ್ನು ಮುಗಿಸಿ ಮತ್ತೆ ಭಜನೆ ಸಂಕೀರ್ತನೆಗಳ ಮೂಲಕ ಯಾತ್ರೆ ಮುಂದುವರೆಸಿದರು. ಮದ್ಯಾಹ್ನ 12:30 ಹೊತ್ತಿಗೆ ಹಾಲ್ಕಲ್ ನಲ್ಲಿರುವ ಸೌಪರ್ಣಿಕಾ ನದಿ ತಟದಲ್ಲಿ ವಿಶ್ರಮಿಸಿದರು. ಅಲ್ಲಿಯೂ ಕೂಡ ಗುರೂಜಿಯವರ ಮಾರ್ಗದರ್ಶನದಲ್ಲಿ ಭಜನೆ ಸಂಕೀರ್ತನೆ ಸತ್ಸಂಗಗಳು ನಡೆದೆವು.
ಸಂಜೆ 6 ಗಂಟೆಗೆ ಕೊಲ್ಲೂರು ತಲುಪಿ ಸೌಪರ್ಣಿಕಾ ನದಿಯಲ್ಲಿ ಸ್ನಾನಾದಿಗಳನ್ನು ಮುಗಿಸಿ ಮೂಕಾಂಬಿಕೆಯ ದರ್ಶನ ಪಡೆದು ಕೃತಾರ್ಥರಾದರು. ಅಲ್ಲಿಯೂ ಕೂಡ ದೇವಸ್ಥಾನದ ಆಡಳಿತ ಮಂಡಳಿಯು ಸುಮಾರು ಒಂದುವರೆ ಗಂಟೆಯ ಕಾಲ ಭಜನೆ ಸಂಕೀರ್ತನೆ ಸತ್ಸಂಗಕ್ಕೆ ದೇವಸ್ಥಾನದ ಆವರಣದಲ್ಲಿ ಅವಕಾಶ ಮಾಡಿಕೊಟ್ಟರು. ಅಲ್ಲದೆ ಮೂರು ಗುರುಗಳನ್ನು ದೇವಸ್ಥಾನದ ಆಡಳಿತ ಮಂಡಳಿಯಿಂದ ಸ್ವಾಗತಿಸಲಾಯಿತು.
ಪಾದಯಾತ್ರಿಗಳ ಬೆಳಿಗ್ಗೆ ಉಪಹಾರ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಶ್ರೀಗಣೇಶ ಗಾಣಿಗ ಉಪ್ಪುಂದ ಇವರು ವಹಿಸಿಕೊಂಡು ಕೃತಾರ್ಥರಾದರು. ಉಚಿತ ಬಸ್ ಸೇವೆ ಎಸ್‌ವಿಎಂಎಸ್ ಮಾಲಿಕರಾದ ಶಿವಾನಂದ ಗಾಣಿಗ ವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಪೋಲಿಸ್ ಇಲಾಖೆಯ ಪರವಾಗಿ ಬಂದಿದ್ದ ಜಿ. ಸುಬ್ರಮಣ್ಯ ಅವರು ದಾರಿ ಮಧ್ಯದಲ್ಲಿ ಊಟೋಪಚಾರ ವಿತರಿಸುವ ಸೇವೆಗೈದರು. ಆರೋಗ್ಯ ಇಲಾಖೆಯ ಪರವಾಗಿ ರಾಘವೇಂದ್ರ ಹೊಳ್ಳ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಾಥ್ ನೀಡಿದರು. ಹರಿಶ್ಚಂದ್ರ ಆಚಾರ್ಯ ಅರೆಹೊಳೆ, ಸತೀಶ್ ಕೊಠಾರಿ ನಾಯ್ಕನಕಟ್ಟೆ, ಗೋವರ್ಧನ ಆಚಾರ್ಯ ಬೈಂದೂರು, ವೀರೇಶ್ ಖಾರ್ವಿ ಉಪ್ಪುಂದ, ರಾಜು ಪೂಜಾರಿ ಸೇರಿದಂತೆ150ಕ್ಕೂ ಅಧಿಕ ಭಕ್ತರು ಪಾದಯಾತ್ರೆಯ ಅನುಭವ ಪಡೆದರು.