ಸಿದ್ಧಾಪುರ: ದಿನಸಿ ಅಂಗಡಿಗೆ ಬೆಂಕಿ. ಕೊಟ್ಯಂತರ ರೂ. ನಷ್ಟ

Call us

Call us

ಕುಂದಾಪುರ: ತಾಲೂಕಿನ ಸಿದ್ದಾಪುರದಲ್ಲಿ ಅಂಗಡಿಯೊಂದು ಬೆಂಕಿಗೆ ಆಹುತಿಯಾಗಿದ್ದು ಸುಮಾರು ಒಂದು ಕೋಟಿಗೂ ಮಿಕ್ಕಿ ನಷ್ಟ ಸಂಭವಿಸಿದೆ.

Call us

Call us

Visit Now

ಸಿದ್ದಾಪುರದ ‘ಕಾಮತ್ ಜನರಲ್ ಸ್ಟೋರ್’ ಬೆಂಕಿಗೆ ಆಹುತಿಯಾದ ಅಂಗಡಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಅಂಗಡಿಯನ್ನು ಆವರಿಸಿದೆ ಎಂದು ಶಂಕಿಸಲಾಗಿದೆ. ಸಿದ್ದಾಪುರ ಪೇಟೆಯಲ್ಲಿರುವ ಈ ಅಂಗಡಿಯಲ್ಲಿ ದಿನಬಳಕೆಯ ವಸ್ತುಗಳಲ್ಲದೆ, ಹಲವಾರು ಗೃಹೋಪಯೋಗಿ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತಿತ್ತು. ಶುಕ್ರವಾರ ರಾತ್ರಿ 11.30 ರ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಕ್ಷಣಾರ್ಧದಲ್ಲಿ ಬೆಂಕಿ ಕೆನ್ನಾಲಗೆ ಅಂಗಡಿಯನ್ನು ಸಂಪೂರ್ಣ ಭಸ್ಮ ಮಾಡಿದೆ. ರವೀಂದ್ರನಾಥ್ ಕಾಮತ್ ಒಡೆತನದ ಈ ಅಂಗಡಿ ಇರುವ ಕಟ್ಟಡಕ್ಕೂ ಹಾನಿಯಾಗಿದೆ.

Click here

Call us

Call us

ಸ್ಥಳಕ್ಕಾಗಮಿಸಿದ ಕುಂದಾಪುರ ಅಗ್ನಿಶಾಮಕ ದಳದವರು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಶಂಕರನಾರಾಯಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Siddapur - fire in general store (1) Siddapur - fire in general store (2) Siddapur - fire in general store (3) Siddapur - fire in general store (4) Siddapur - fire in general store (5)

Leave a Reply

Your email address will not be published. Required fields are marked *

3 × 4 =