ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದ ಸರ್ವತೋಮುಖ ಅಭಿವೃದ್ದಿ ಸಾಮಾಜಿಕ ಧಾರ್ಮಿಕ, ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ, ಅಭಿವೃದ್ಧಿಯ ಮೂಲಕ ಸಾಧ್ಯವಿದೆ. ಮರಾಠಿ ಸಮುದಾಯ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧಿಯನ್ನು ಹೊಂದಿದ್ದರು, ಇದುವರೆಗೂ ಆರ್ಥಿಕವಾಗಿ ತನ್ನದೇ ಆದ ಸಂಸ್ಥೆಯನ್ನ ಕಟ್ಟಿಕೊಳ್ಳುವುದರಲ್ಲಿ ಹಿಂದುಳಿದಿದ್ದು, ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಜಡ್ಕಲ್ ಸಮುದಾಯದ ಅಭಿವೃದ್ದಿಗೆ ಮತ್ತು ಗಟ್ಟಿತನಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಹೇಳಿದರು.

Call us

Call us

Visit Now

ಅವರು ಜಡ್ಕಲ್‌ನಲ್ಲಿ ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ ಪ್ರಥಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

Click here

Call us

Call us

ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಮಾತನಾಡಿ, ಮರಾಠಿ ಸಮುದಾಯದವರ ಕನಸಿನ ಕೂಸು, ಸುಮಾರು ಮೂವತ್ತು ವ?ಗಳ ಆಶಯ, ಸಹಕಾರಿ ಸಂಸ್ಥೆಯನ್ನು ಹುಟ್ಟುಹಾಕುವುದಾಗಿತ್ತು. ಅದು ಇಂದು ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿದೆ. ತನ್ಮೂಲಕ ಮರಾಠಿಸಮುದಾಯದವರು ಒಗ್ಗಟ್ಟು ಮತ್ತು ಆರ್ಥಿಕ ಸ್ಥಿತಿಯ ಅರಿವಿನ ಅಭಿವೃದ್ಧಿಯ ಸಂಕೇತವನ್ನು ಇದು ಸಾರಿದೆ ಮತ್ತು ಸಮುದಾಯದ ಅಭಿವೃದ್ಧಿಗೆ ಇದು ಪೂರಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಮುಖ್ಯ ಪ್ರವರ್ತಕ ಮಹಾಲಿಂಗ ನಾಯ್ಕ ಜೋಗಿ ಜಡ್ಡು ಗೋರ್ಕಲ್ ಮಾತನಾಡಿ, ಸಂಸ್ಥೆಯ ಬೆಳವಣಿಗೆಗೆ ಸರ್ವರ ಸಹಕಾರ ಅಗತ್ಯ, ರಾಜಕೀಯ ಮುಖಂಡರು, ಸಮಾಜದ ಭಾಂದವರು ಹಾಗೂ ಅಧಿಕಾರಿ ಮಿತ್ರರ ಮಾರ್ಗದರ್ಶನ ಈ ಸಂಸ್ಥೆಯ ಹುಟ್ಟಿಗೆ ಕಾರಣ ಮತ್ತು ಸರ್ವರ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ನಿರ್ದೇಶಕರಾದ ರಾಜು ಪೂಜಾರಿ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಕಮಲಶಿಲೆಯ ಉಪಾಧ್ಯಕ್ಷರಾದ ನಾಗಪ್ಪ ಪೂಜಾರಿ, ಗೋಪಾಲಕೃ ವಿವಿಧೋದ್ದೇಶ ಸೇವಾ ಸಹಕಾರ ಸಂಘ ನಿ ಕುಂದಾಪುರದ ಅಧ್ಯಕ್ಷರಾದ ರಮೇಶ್ ಗಾಣಿಗ ಕೊಲ್ಲೂರು, ಶ್ರೀ ಮಹಿಷಿ ಮರ್ದಿನಿ ದೇವಸ್ಥಾನದ ಮೊಕ್ತೇಸರರಾದ ಸೂರ್ಯನಾರಾಯಣ ಭಟ್, ಸೈಂಟ್ ಜಾರ್ಜ್ ಫೋರನ್ ಚರ್ಚ್ ಜಡ್ಕಲ್ ಧರ್ಮಗುರುಗಳಾದ ರೆ. ಫಾ. ವರ್ಗಿಸ್ ಪುದಿಯೇಡತ್, ಛತ್ರಪತಿ ಯುವಸೇನೆ ಉಪಾಧ್ಯಕ್ಷರಾದ ಚಂದ್ರಶೇಖರ್ ನಾಯ್ಕ್ ಹರ್‌ಕೋಡು, ಬೈಂದೂರು ವಲಯ ಮರಾಟಿ ಸಮಾಜ ಸುಧಾರಕ ಸಂಘದ ಗೌರವಾಧ್ಯಕ್ಷರಾದ ನಾರಾಯಣ ನಾಯ್ಕ್ ಹಾಗೂ ಹಾಲಿ ಅಧ್ಯಕ್ಷರಾದ ಬೋಜು ನಾಯ್ಕ್, ಪ್ರವರ್ತಕರಾದ ವನಿತಾ ವಿ ಕನ್ಕಿಮಡಿ, ಸೊಸೈಟಿಯ ಪ್ರವರ್ತಕರಾದ ಸದಾಶಿವ ನಾಯ್ಕ ನಂದಿಗದ್ದೆ, ಸುರೇಶ್ ನಾಯ್ಕ ಬೆಳ್ಳಾಲ, ಮಂಜುನಾಥ್ ನಾಯ್ಕ ದಳಿ, ದೇವಪ್ಪ ನಾಯ್ಕ ಮುತ್ತಾಬೆರು, ಮಂಜುನಾಥ್ ನಾಯ್ಕ ವಾಟೆಬಚ್ಚಲು, ಶಂಕರನಾಯ್ಕ್ ಕೊಡಿಯಾಳಕೇರಿ, ರವೀಂದ್ರ ನಾಯ್ಕ್ ಮಾರಣಕಟ್ಟೆ ರಾಮನಾಯ್ಕ ಯಳೆಜಿತ, ಜಯಂತ ನಾಯ್ಕ್ ಹೊಸೂರು, ಮಲ್ಲಿಕಾ ಜೋಗಿಜಿಡ್ಡು ಹಾಗೂ ಗೌರವ ಸಲಹೆಗಾರರಾದ ಡಾ.ರಘು ನಾಯ್ಕ ಮತ್ತು ಉದಯ ನಾಯ್ಕ ಗೋಳಿಹೊಳೆ ಉಪಸ್ಥಿತರಿದ್ದರು

ಸದಾಶಿವ ನಾಯಕ್ ನಂದಿಗದ್ದೆ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ರಘು ನಾಯಕ್ ಕಾರ್ಯಕ್ರಮ ನಿರೂಪಿಸಿದರು. ವನಿತಾ ವಿ. ಕನ್ಕಿಮಡಿ ಗಣ್ಯರನ್ನು ಸ್ವಾಗತಿಸಿದರು ಉಪನ್ಯಾಸಕರಾದ ಪಾಂಡುರಂಗ ಧನ್ಯವಾದಗೈದರು

 

Leave a Reply

Your email address will not be published. Required fields are marked *

fourteen − two =