ಸಿಪಿಐ(ಎಂ) ಕುಂದಾಪುರ ವಲಯ ಸಮ್ಮೇಳನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಲಾಭಕೋರ ಹಣಕಾಸು ಬಂಡವಾಳ ಮತ್ತು ಬಂಡವಾಳಶಾಹಿಯ ವಿರುದ್ಧದ ಸಮರವನ್ನು ಇನ್ನೂ ತೀವ್ರಗೊಳಿಸಲು ಆ ಮುಖಾಂತರ ಸಾಮಾಜಿಕ ವ್ಯವಸ್ಥೆಯ ಬದಲಾವಣೆಗಾಗಿ ಮತ್ತಷ್ಟು ತನ್ನನ್ನು ಹೇಗೆ ಸಮಪಿ೯ಸಿಕೊಳ್ಳಬೇಕೆಂದೂ ಅದಕ್ಕೆ ಬೇಕಾಗಿರುವ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಈ ಸಮ್ಮೇಳನವು ಚಚಿ೯ಸಬೇಕು ಎಂದು ಸಿಪಿಐ(ಎಂ)ಪಕ್ಷದ ರಾಜ್ಯ ಮುಖಂಡ ಕೆ.ಶಂಕರ್ ಕರೆ ನೀಡಿದರು.

Call us

Call us

Call us

ಕುಂದಾಪುರ ಹೆಂಚು ಕಾಮಿ೯ಕ ಭವನದ ಸಭಾಂಗಣದಲ್ಲಿ ಜರಗಿದ ಸಿಪಿಐ(ಎಂ)ಕುಂದಾಪುರ ವಲಯದ ಮೂರನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

Call us

Call us

ಪಕ್ಷದ ಹಿರಿಯ ಮುಖಂಡ ಯು.ದಾಸಭಂಡಾರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಜರಗಿದ ಸಮ್ಮೇಳನದ ಪ್ರತಿನಿಧಿ ಅಧಿವೇಶನದಲ್ಲಿ ಕಾಯ೯ದಶಿ೯ ಎಚ್.ನರಸಿಂಹ ಚಟುವಟಿಕೆ ವರದಿ ಮಂಡಿಸಿದರು. ವರದಿಯ ಮೇಲೆ ಚಚೆ೯ ನಡೆದು ಅಂಗೀಕರಿಸಲಾಯಿತು. ಕೇಂದ್ರ,ರಾಜ್ಯ ಸರಕಾರದ ರೈತ, ಕಾಮಿ೯ಕ ವಿರೋಧಿ ನೀತಿ ವಿರುದ್ಧ, ಬೆಲೆ ಏರಿಕೆ ವಿರುದ್ದ, ಕರಾವಳಿ ನಿಯಂತ್ರಣ ವಲಯ ಕಠಿಣ ನಿಯಯಮಾವಳಿ ಸಡಿಲಗೊಳಿಸಲು, ಕುಂದಾಪುರ ಬೊಬ್ಬಯ೯ನ ಕಟ್ಟೆ ಬಳಿ ಹೆದ್ದಾರಿ ರಸ್ತೆ ದಾಟಲವಕಾಶಕ್ಕೆ ಒತ್ತಾಯಿಸಿ, ಪುರಸಭೆ ವ್ಯಾಪ್ತಿ ರಸ್ತೆ ದುರಸ್ತಿ, ರಿಂಗ್ ರೋಡ್ ಕಾಮಗಾರಿ ಇತ್ಯಾದಿ ಬೇಡಿಕೆಗಳ ಬಗ್ಗೆ ಸಮ್ಮೇಳನದಲ್ಲಿ ನಿಣ೯ಯಗಳನ್ನು ಮಂಡಿಸಲಾಯಿತು.

ಹಿರಿಯ ನ್ಯಾಯವಾದಿ ಶಿರಿಯಾರ ಮುದ್ದಣ್ಣ ಶೆಟ್ಟಿ ಸಮ್ಮೇಳನವನ್ನು ದ್ದೇಶಿಸಿ ಮಾತನಾಡಿದರು. ಬೈಂದೂರು ವಲಯ ಕಾಯ೯ದಶಿ೯ ಎಚ್. ನರಸಿಂಹ ಪ್ರಾಸ್ತಾವನೆ ಭಾಷಣ ಮಾಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿ. ನರಸಿಂಹ ವಹಿಸಿದ್ದರು. ಸಿಪಿಐ(ಎಂ)ಪಕ್ಷದ ಜಿಲ್ಲಾ ಕಾಯ೯ದಶಿ೯ಮಂಡಳಿ ಸದಸ್ಯ ಮಹಾಬಲ ವಡೇರಹೊಬಳಿ, ಸುರೇಶ್ ಕಲ್ಲಾಗರ್, ವೆಂಕಟೇಶ್ ಕೋಣಿ, ಸಿಪಿಐ(ಎಂ)ಜಿಲ್ಲಾ ಮುಖಂಡರಾದ ನಾಗರತ್ನ ನಾಡ, ರಾಜೇಶ್ ವಡೇರಹೋಬಳಿ ಸಂತೋಷ ಹೆಮ್ಮಾಡಿ ಉಪಸ್ಥಿತರಿದ್ದರು. ರವಿ. ವಿ. ಎಂ. ಶ್ರದ್ಧಾಂಜಲಿ ಠರಾವು ಮಂಡಿಸಿದರು.

Leave a Reply

Your email address will not be published. Required fields are marked *

four + four =