ಸುರಕ್ಷಿತವಾಗಿ ಕಡಲ ಒಡಲು ಸೇರಿದ ಕಡಲಾಮೆ ಮರಿಗಳು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಫೆ.11:
ತಾಲೂಕಿನ ಕೋಡಿ ಲೈಟ್ ಹೌಸ್ ಎದುರು 55 ದಿನಗಳ ಹಿಂದೆ ಪತ್ತೆಯಾದ ಕಡಲಾಮೆ ಮೊಟ್ಟೆಯಿಂದ ಹೊರಬಂದ ಆಲೀವ್ ರಿಡ್ಲಿ ಜಾತಿಗೆ ಸೇರಿದ 74 ಕಡಲಾಮೆ ಮರಿಗಳು ಸುರಕ್ಷಿತವಾಗಿ ಕಡಲ ಸೇರಿವೆ.

Click here

Click Here

Call us

Call us

Visit Now

Call us

Call us

ಅರಣ್ಯ ಇಲಾಖೆ ಎಫ್.ಎಸ್.ಎಲ್ ಇಂಡೀಯಾ ಸ್ಥಳೀಯ ಮೀನುಗಾರರು ಮತ್ತು ರೀಫ್ ವಾಚ್ ಸಂಸ್ಥೆಯ ಕಡಲಾಮೆ ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದು, ಗುರುವಾರ ರಾತ್ರಿ ಕಡಲು ಸೇರುವ ಪ್ರಕ್ರಿಯೆ 2 ಗಂಟೆಗಳ ಹೆಚ್ಚು ಕಾಲ ನಡೆಯಿತು.

ಅರಣ್ಯ ಇಲಾಖೆ ಅಧಿಕಾರಿಗಳಾದ ಉದಯ ಬಿ, ಬಸವರಾಜ್, ರಂಜಿತ್ ಪೂಜಾರಿ ಹಾಗೂ ಎಫ್.ಎಸ್.ಎಲ್ ಸಂಸ್ಥೆಯ ದಿನೇಶ್ ಸಾರಂಗ, ನಾಗರಾಜ ಶೆಟ್ಟಿ ಸಬ್ಲಾಡಿ, ವೆಂಕಟೇಶ್ ಎಂ ಮತ್ತು ರೀಪ್ ವಾಚ್ ಸಂಸ್ಥೆಯ ಕಾರ್ಯಕರ್ತರಾದ ತೇಜಸ್ವಿನಿ, ವಿರೀಲ್ ಕುಮಾರ್ ಜೊತೆಗಿದ್ದರು. ಅಲ್ಲದೆ ಸ್ಥಳೀಯ ಮೀನುಗಾರರಾದ ಸಂತೋಷ, ಸುಬ್ರಮಣ್ಯ ಸಾರಂಗ, ಧನುಷ್ ಬಿ.ಆರ್, ಭರತ್ ಖಾರ್ವಿ, ಲಕ್ಷ್ಮಣ ಪೂಜಾರಿ, ಉದಯ ಖಾರ್ವಿ ಕೊನೆತನಕ ಇದ್ದು ಸಹಕರಿಸಿದರು. ವಿಶೇಷವಾಗಿತ್ತು.

ಇನ್ನೂ 4 ಕಡಲಾಮೆ ಮೊಟ್ಟೆಯ ಗೂಡು ರಕ್ಷಣೆಯಲ್ಲಿ ಇದ್ದು ಈ ಎಲ್ಲಾ ಗೂಡುಗಳಿಂದ ಮರಿಗಳು ಸುರಕ್ಷಿತವಾಗಿ ಕಡಲು ಸೇರಲಿವೆ ಎಂದು ಕಡಲಾಮೆ ಸಂರಕ್ಷಣೆಯಲ್ಲಿ ಮುತುವರ್ಜಿವಹಿಸುತ್ತಿರುವ ಎಫ್.ಎಸ್.ಎಲ್ ಸಂಸ್ಥೆಯ ಅಧ್ಯಕ್ಷ ರಾಕೇಶ್ ಸೋನ್ಸ್ ಅಭಿಪ್ರಾಯ ಪಟ್ಟಿದ್ದಾರೆ.

Leave a Reply

Your email address will not be published. Required fields are marked *

seventeen + 15 =