ಸೆ.26: ನೇತ್ರದಾನ ಘೋಷಣಾ ಕಾರ್ಯಕ್ರಮ

Call us

Call us

ಕುಂದಾಪುರ: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ದ.ಕ., ಉಡುಪಿ ಇದರ ರಜತ ಮಹೋತ್ಸವದ ಅಂಗವಾಗಿ ಎಸ್‌ಕೆಪಿಎ ಕುಂದಾಪುರ ವಲಯದ ವತಿಯಿಂದ ಸಂಘದ ಸದಸ್ಯರು ಹಾಗೂ ಸಾರ್ವಜನಿಕರಿಂದ ನೇತ್ರದಾನ ಘೋಷಣಾ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆ.26 ಬೆಳಿಗ್ಗೆ 10ರಿಂದ ಕುಂದಾಪುರದ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ನಡೆಯಲಿದೆ ಎಂದು ಎಸ್‌ಕೆಪಿಎ ಕುಂದಾಪುರ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ ತಿಳಿಸಿದರು.

Call us

Call us

Visit Now

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಎಸ್‌ಕೆಪಿಎ ಅಧ್ಯಕ್ಷ ವಾಸುದೇವ ರಾವ್ ಅಧ್ಯಕ್ಷತೆ ವಹಿಸುವರು. ಸಚಿವ ವಿನಯ ಕುಮಾರ್ ಸೊರಕೆ ಪ್ರಮಾಣ ಪತ್ರ ವಿತರಿಸುವರು. ಈ ಸಂದರ್ಭದಲ್ಲಿ ಖ್ಯಾತ ನ್ಯಾಯವಾದಿಗಳಾದ ರವಿಕಿರಣ್ ಮುರ್ಡೇಶ್ವರ ಅವರನ್ನು ಸನ್ಮಾನಿಸಲಾಗುವುದು. ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

Click here

Call us

Call us

ಈ ಕಾರ್ಯಕ್ರಮ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೇಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ನಡೆಯಲಿದ್ದು, ಈಗಾಗಲೇ ಶಾಸ್ತ್ರೀವೃತ್ತದಲ್ಲಿ ನೋಂದಾವಣೆಗೆ ಕೌಂಟರ್ ತೆರೆಯಲಾಗಿದೆ. ಶನಿವಾರ ಈ ಬಗ್ಗೆ ಜಾಗೃತಿ ಮೂಡಿಸುವ ಜಾಥಾ ನಡೆಯಲಿದೆ. ಸಂಘ ಸಂಸ್ಥೆಗಳಿಂದ ೧೦ಕ್ಕೂ ಹೆಚ್ಚು ಜನ ನೇತ್ರದಾನ ನೊಂದಣಿ ಮಾಡಿದರೆ ಅಂಥಹ ಸಂಘ ಸಂಸ್ಥೆಗಳನ್ನು ಗುರುತಿಸಲಾಗುವುದು ಎಂದರು.

ಸುದ್ಧಿಗೋಷ್ಠಿಯಲ್ಲಿ ಸಲಹಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯಕ್ರಮ ಸಂಚಾಲಕ ಗಿರೀಶ್ ಕೆ., ಪ್ರಧಾನ ಕಾರ್ಯದರ್ಶಿ ರಾಜಾ ಮಠದಬೆಟ್ಟು, ಉಪಾಧ್ಯಕ್ಷ ದೊಟ್ಟಯ್ಯ ಪೂಜಾರಿ, ಗ್ರೇಶನ್ ಡಯಾಸ್, ಕೋಶಾಧಿಕಾರಿ ರಾಘು ವಿಠಲವಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

6 + twenty =