ಕುಂದಾಪುರ: ಸೇವೆಯಲ್ಲಿ ಭಗವಂತನನ್ನು ಕಂಡಾಗ ಕಾರ್ಯಚಟುವಟಿಕೆಯಲ್ಲಿ ಶ್ರದ್ಧೆ, ಪ್ರಾಮಾಣಿಕತೆ ತುಂಬಿ ನಾವುಗಳು ಸಮಾಜಕ್ಕೆ ವರವಾಗಿ ನಿಲ್ಲಲು ಸಾಧ್ಯ ಎಂದು ಸೈಂಟ್ ಮೇರಿಸ್ ಫ್ರೌಢ ಶಾಲೆ ಮುಖ್ಯೋಪಧ್ಯಾಯಿನಿ ಸಿಸ್ಟರ್ ಚೇತನ ಹೇಳಿದರು.
ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕುಂದಾಪುರದ ಸೈಂಟ್ ಮೇರಿಸ್ ಫ್ರೌಢ ಶಾಲೆಯಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷೆ ಸೌಮ್ಯ, ಕಾರ್ಯದರ್ಶಿ ಪ್ರಜ್ವಲ್ ಪಾಟೀಲ್ ಅವರಿಗೆ ಪದಪ್ರದಾನ ನೆರವೇರಿಸಿದರು.
ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ ಇಂಟರ‍್ಯಾಕ್ಟ್ ಕ್ಲಬ್ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋಧಿಸಿದರು. ಇಂಟರ‍್ಯಾಕ್ಟ್ ಕ್ಲಬ್ ಛೇರ್‌ಮೆನ್ ವೆಂಕಟೇಶ ಪ್ರಭು, ಇಂಟರ‍್ಯಾಕ್ಟ್ ಕ್ಲಬ್ ನಿರ್ಗಮನ ಅಧ್ಯಕ್ಷೆ ಐಶ್ವರ್ಯ, ನಿರ್ಗಮನ ಕಾರ್ಯದರ್ಶಿ ಪ್ರಥ್ವಿಕ್ ಉಪಸ್ಥಿತರಿದ್ದರು. ಇಂಟರ‍್ಯಾಕ್ಟ್ ಕ್ಲಬ್ ಕೋ-ಆರ್ಡಿನೇಟರ್ ಸ್ಟ್ಯಾನಿ ದಿನಮಣಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.