ಸೋಲಿನಿಂದ ಜೀವನ ಪಾಠ : ಮಂಜುಳಾ ವಿ.ಪ್ರಸಾದ್

Call us

Call us

ಕುಂದಾಪುರ: ರೋಟರಿ ಮಿಡ್ ಟೌನ್ ತನ್ನ ರೋಟರಿ ಮಿಡ್ ಟೌನ್ ಹಾಲ್‌ನಲ್ಲಿ ಆಯೋಜಿಸಿದ್ದ ಕುಟುಂಬ ಸಮ್ಮಿಲನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜುಳಾ ವಿ ಪ್ರಸಾದ್ ಇವರು ನೆರೆದ ರೋಟರಿ ಕುಟುಂಬದ ಸದಸ್ಯರನ್ನು ಮತ್ತು ಆಹ್ವಾನಿತರನ್ನು ಉದ್ದೇಶಿಸಿ ಮೂಡನಂಬಿಕೆಗಳ ಬಗ್ಗೆ ಹಾಗೂ ಅವುಗಳ ನಿರ್ಮೂಲನೆಯ ಕುರಿತು ಹಾಗೂ ವೈಜ್ಣಾನಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವ ಬಗ್ಗೆ, ಸಮಾಜದಲ್ಲಿ ಮಕ್ಕಳನ್ನು ಸತ್ಪ್ರಜೆಗಳಾಗಿ ಉತ್ತಮ ನಾಗರಿಕರಾಗಿ ಬೆಳೆಸುವ ಬಗ್ಗೆ ಹಾಗೂ ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಪ್ರಾಮುಖ್ಯತೆ, ಹಣೆಗೆ ತಿಲಕ ಇಡುವ ಸಂಪ್ರದಾಯದ ಹಿಂದಿನ ಮಹತ್ವ ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದರು. ಸಭೆಯಲ್ಲಿ ೨೦೧೭-೧೮ನೇ ಸಾಲಿನಲ್ಲಿ ರಚನೆಯಾದ ರೋಟರಿಯ ಹೊಸ ಜಿಲ್ಲೆ-೩೧೮೨ಯ ಮೊದಲ ಗವರ್ನರ್ ಆಗಿ ಘೋಷಣೆಯಾದ ಬಳಿಕ ನಮ್ಮ ಕ್ಲಬ್‌ಗೆ ಅತಿಥಿಯಾಗಿ ಪ್ರಥಮವಾಗಿ ಬೇಟಿಯಿತ್ತ ಅಭಿನಂದನ್ ಶೆಟ್ಟಿಯವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು

Call us

Call us

Visit Now

ಸಮ್ಮಿಲನ ಸಭೆಯಲ್ಲಿ ಮುಖ್ಯ ಅತಿಥಿ ಮಂಜುಳಾ ವಿ ಪ್ರಸಾದ್, ಅಭಿನಂದನ್ ಶೆಟ್ಟಿ ಹಾಗೂ ಜೋನಲ್ ಲೆಪ್ಟಿನೆಂಟ್ ಮಂಜುನಾಥ್ ಮಹಾಲೆಯವರು ಉಪಸ್ಥಿತರಿದ್ದರು. ರೋಟರಿ ಮಿಡ್ ಟೌನ್‌ನ ಅಧ್ಯಕ್ಷರಾದ ಮಹೇಶ್ ಬೆಟ್ಟಿನ್ ಇವರು ಸ್ವಾಗತಿಸಿದರು. ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿಯವರು ವಂದಿಸಿದರು.

Click here

Call us

Call us

Leave a Reply

Your email address will not be published. Required fields are marked *

19 − 9 =