ಸೌಕೂರು ದೇವಸ್ಥಾನ ಕಳ್ಳತನ: ವರ್ಷ ಕಳೆದರೂ ಕಳ್ಳರ ಪತ್ತೆಹಚ್ಚಿಲ್ಲ. ಭಕ್ತರ ಆಕ್ರೋಶ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎರಡು ಬಾರಿ ಕಳ್ಳತನ ನಡೆದು ಒಂದು ವರ್ಷವಾಗಿದ್ದರೂ ಕಳ್ಳರ ಪತ್ತೆಹಚ್ಚಲು ಪೊಲೀಸರು ವಿಫಲವಾಗಿದ್ದಾರೆ. ತನಿಖೆ ಚುರುಕುಗೊಳಿಸಿ ಆರೋಪಿಗಳ ತಕ್ಷಣ ಪತ್ತೆಹಚ್ಚಬೇಕು ಎಂದು ಸೌಕೂರು ದೇವಸ್ಥಾನ ಭಕ್ತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Call us

Call us

Call us

ಕುಂದಾಪುರದ ಡಿವೈಎಸ್ಪಿ ಕಛೇರಿಯಲ್ಲಿ ಡಿವೈಎಸ್ಪಿ ಪ್ರವೀಣ್ ನಾಯ್ಕ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿ ಮಾತನಾಡಿದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಮೇಳ ಮಾಲೀಕ ಕಿಶನ್ ಹೆಗ್ಡೆ ಮಾತನಾಡಿ ಒಂದೇ ದೇವಸ್ಥಾನದಲ್ಲಿ ಎರಡು ಭಾರಿ ಕಳ್ಳತನ ನಡೆದಿದ್ದು, ಒಂದು ಬಾರಿ ವ್ಯಕ್ತಿಯ ಚಹರೆ ಗುರುತು ಸಿಸಿ ಕ್ಯಾಮೆರಾದಲ್ಲಿ ಕಾಣಿಸಿದ್ದರೂ ಕೂಡ ಇಲಾಖೆ ಕಳ್ಳರನ್ನು ಹಿಡಿಯಲು ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿದೆ. ಈ ಮೊದಲು ತನಿಖೆ ಕೈಗೆತ್ತಿಕೊಂಡ ಎಸ್ಪಿ ಡಿವೈಎಸ್ಪಿ ಹಾಗೂ ಡಿಸಿ ಬದಲಾವಣೆಗೊಂಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ಪೊಲೀಸ್ ಇಲಾಖೆ ಎಚ್ಚರಿಸುವಗ ಸಲುವಾಗಿ ಡಿವೈಎಸ್ಪಿಗೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಸೌಕೂರು ದೇವಸ್ಥಾನದ ಕಳ್ಳತನಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಆಯಾಮಗಳಲ್ಲಿ ತನಿಖೆ ನಡೆಸಿದ್ದೇವೆ. ಸಿಸಿ ಕ್ಯಾಮೆರಾದಲ್ಲಿ ಕಾಣಸಿಕ್ಕ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದೇವೆ. ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ವ್ಯಕ್ತಿಯ ಚಹರೆ ಗುರುತು ಹೊರರಾಜ್ಯದವನೆಂಬ ಗುಮಾನಿ ಇದೆ. ಸೌಕೂರು ದೇವಸ್ಥಾನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಶೀಘ್ರವಾಗಿ ಆರೋಪಿ ಪತ್ತೆ ಹಚ್ಚುತ್ತೇವೆ ಎಂದು ಕುಂದಾಪುರ ಡಿಎಸ್ಪಿ ಪ್ರವೀಣ್ ನಾಯ್ಕ್ ಭರವಸೆ ನೀಡಿದರು.

ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ೨೦೧೫, ಆ. ೧೪ರ ರಾತ್ರಿ ಕಳ್ಳತನ ನಡೆದಿತ್ತು. ಕೆಲವೇ ದಿನಗಳ ಅಂತರದಲ್ಲಿ ಮತ್ತೊಮ್ಮೆ ಕಳವು ಮಾಡಲಾಯಿತು. ಒಟ್ಟು ಒಂದು ಕೋಟಿಗೂ ಮಿಕ್ಕ ದೇವಿ ಚಿನ್ನಾಭರಣ ಕಳವಾಗಿತ್ತು. ಎರಡನೇ ಬಾರಿ ೨೦೧೫,ಫೆ,೧ರ ರಾತ್ರಿ ಮತ್ತೆ ಕಳ್ಳತನ ನಡೆದು, ಸುಮಾರು ೧.೩೦ ಲಕ್ಷ ಮೂವತ್ತು ಸಾವಿರ ಮೌಲ್ಯದ ಸೊತ್ತು ಕಳವಾಗಿತ್ತು.

ಶ್ರೀ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭಕ್ತರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಭರತೇಶ್, ಗೋಪಾಲ ದೇವಾಡಿಗ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *

18 − twelve =