ಸೌಡ-ಶಂಕರನಾರಾಯಣಕ್ಕೆ ಇನ್ನೂ ದೊರೆಯದ ಸೇತುವೆ ಭಾಗ್ಯ!

Call us

Call us

ಶಂಕರನಾರಾಯಣ: ಹಲವು ದ್ವೀಪಗಳೂ, ನದಿಪಾತ್ರಗಳಿಂದ ಸುತ್ತುವರಿದ ಕುಂದಾಪುರ ತಾಲೂಕು, ಇನ್ನು ಹಲವು ಕಡೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಸಂಕ ದಾಟಿ ಪೇಟೆ ಪಟ್ಟಣಗಳಿಗೆ ಹೋಗುವ ಪರಿಸ್ಥಿತಿ ಇನ್ನು ಹಲವು ಗ್ರಾಮಗಳಲ್ಲಿ ಜೀವಂತವಾಗಿದೆ. ಮಳೆಗಾಲದಲ್ಲಂತೂ, ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಂಕ ದಾಟಿ ಶಾಲೆಗೆ ಹೋಗುವ ದಯನೀಯ ಪರಿಸ್ಥಿತಿ. ಹೌದು. ಹಲವು ವರುಷಗಳ ಬೇಡಿಕೆಯಾದ ಸೌಡ – ಶಂಕರನಾರಾಯಣ ಸೇತುವೆ ಭಾಗ್ಯ ಇನ್ನು ಈ ಭಾಗಕ್ಕೆ ಮರೀಚಿಕೆಯಾಗಿದೆ.

Click here

Click Here

Call us

Call us

Visit Now

Call us

Call us

ಕುಂದಾಪುರ ತಾಲೂಕಿನ ಶಂಕರನಾರಾಯಣ ಹಾಗೂ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಮಧ್ಯೆ ಸೌಡ ಎಂಬಲ್ಲಿ ವಾರಾಹಿ ನದಿ ಹರಿಯುತ್ತಿದ್ದು, ಹಿಂದೆ ಇಲ್ಲಿ ದೋಣಿ ಸೌಲಭ್ಯವಿದ್ದು, ಅದೂ ಇಲ್ಲವಾಗಿದೆ. ಜನ್ನಾಡಿಯಿಂದ ಕೇವಲ 3-4 ಕೀ.ಮೀ ಒಳಗೆ ಸೌಡ ಸೇತುವೆಯಾದರೆ ಶಂಕರನಾರಾಯಣ ತಲುಪಬಹುದು, ಈಗ ಸುತ್ತು ಬಳಸಿ ಹಾಲಾಡಿ ಮುಖಾಂತರ 8-10 ಕೀ.ಮೀ ದೂರ ಕ್ರಮಿಸಬೇಕು. ಸೌಡ ಸಂಪರ್ಕ ಸೇತುವೆಯಿಂದ ಪ್ರಯೋಜನಗಳು. ಶಿವಮೊಗ್ಗ ಹಾಗೂ ಸಿದ್ಧಾಪುರ, ಶಂಕರನಾ ರಾಯಣ ಭಾಗದ ಜನರಿಗೆ ಜಿಲ್ಲಾ ಕೇಂದ್ರವಾದ ಉಡುಪಿ ಹಾಗೂ ಕುಂದಾಪುರಕ್ಕೆ ಹೋಗಲು 8-10 ಕೀ.ಮೀ ದೂರ ಉಳಿಯುಲಿದೆ.
ಹಾರ್ದಳ್ಳಿ-ಮಂಡಳ್ಳಿ, ಹೊಂಬಾಡಿ-ಮಂಡಾಡಿ, ಯಡಾಡಿ-ಮರ್ತ್ಯಾಡಿ, ಜಪ್ತಿ, ಮೊಳಹಳ್ಳಿ, ಕೊರ್ಗಿ ಗ್ರಾಮದವರು ಶಂಕರನಾರಾಯಣದಲ್ಲಿರುವ ಉಪನೊಂದಣಿ ಕಛೇರಿ, ಅರಣ್ಯ ಇಲಾಖೆ, ಉಪ ಖಜಾನೆ , ಇನ್ನು ಸದ್ಯಸಲ್ಲೆ ಪ್ರಾರಂಭವಾಗಿರುವ ವಿದ್ಯುತ್ ಉಪವಿಭಾಗ ಸಹಿತ ಹತ್ತು ಹಲವು ಸರಕಾರಿ ಕಛೇರಿಗಳಿಗೆ ಶಂಕರನಾರಾಯಣವನ್ನು ಅವಲಂಬಿ ಸಬೇಕಾ ಗಿರುವುದರಿಂದ ಸೌಡ – ಶಂಕರನಾರಾಯಣ ಸೇತುವೆ ನಿರ್ಮಾಣದಿಂದ ಈ ಗ್ರಾಮಗಳಿಗೆ ಸಂಪರ್ಕ ಸಾಧನ ಅತೀ ಹತ್ತಿರದಲ್ಲೇ ಆದಂತೆ ಆಗುತ್ತದೆ.

ಹುಸಿಯಾದ ಭರವಸೆ
ಒಂದುವರೆ ವರ್ಷದ ಹಿಂದೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ೭ ಕೋಟಿ ರೂಪಾಯಿ ಹಣ ಸೌಡ ಸೇತುವೆ ರಚನೆ ಬಗ್ಗೆ – ಮಂಜೂರಾಗಿದೆಯೆಂದು ಜನಪ್ರತಿನಿಧಿಗಳು ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆ ನೀಡಿದ್ದು ಹೇಳಿಕೆಗಳು ಹುಸಿಯಾಗಿದ್ದು, ಸೇತುವೆ ನಿರ್ಮಾಣದ ಯಾವ ಕಾಮಗಾರಿಗಳು ಪ್ರಾರಂಭವಾಗಿಲ್ಲ. ಜನಪ್ರತಿನಿಧಿಗಳ ಪತ್ರಿಕಾ ಹೇಳಿಕೆಯಂತೆ ಸೇತುವೆ ರಚನೆಗೆ ಕೊಡಲೇ ಕ್ರಮ ಕೈಗೊಳ್ಳುವುದು ಒಳಿತು.
ಸೇತುವೆ ನಿರ್ಮಾಣಕ್ಕೆ ಅಡ್ಡಿಯೇನು ? ಕ್ಷೇತ್ರ ಗಡಿ ತಾರತಮ್ಯವಾಗಿರಬಹುದೇ?

ಕುಂದಾಪುರ ತಾಲೂಕಿನ ಪ್ರಮುಖ ಸಂಪರ್ಕ ಸೇತುವೆಗಳಾದ ಕೋಡಿ, ಮರವಂತೆ, ಕನ್ನಡ ಕುದ್ರು, ಆನಗಳ್ಳಿ ಸೇತುವೆಗಳ ಕೆಲಸ ಪ್ರಗತಿಯಲ್ಲಿದ್ದರೆ, ಸೌಡ – ಶಂಕರನಾರಾಯಣಕ್ಕೆ ಈ ಭಾಗ್ಯ ಇನ್ನು ಬರದಿರಲು ಕಾರಣವೇನು ಎಂಬ ಸಂಶಯ ಈ ಭಾಗದ ಜನರಲ್ಲಿ ಬೇರೂರಿದೆ. ಸೌಡ – ಶಂಕರನಾರಾಯಣ ಸೇತುವೆ ರಚನೆಯಾಬೇಕಾದ ಸ್ಥಳ ಶಂಕರನಾರಾಯಣ ಹಾಗೂ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಸೌಡ ಎಂಬಲ್ಲಿದ್ದು, ಇದರಲ್ಲಿ ಸೇತುವೆ ಅರ್ಧ ಭಾಗ ಶಂಕರನಾರಾಯಣ ಗ್ರಾಮ (ಬೈಂದೂರು ವಿಧಾನ ಸಭಾ ಕ್ಷೇತ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರ) ಹಾಗೂ ಇನ್ನು ಅರ್ಧ ಭಾಗ ಹಾರ್ದಳ್ಳಿ-ಮಂಡಳ್ಳಿ ಗ್ರಾಮ (ಕುಂದಾಪುರ ವಿಧಾನ ಸಭಾ ಕ್ಷೇತ್ರ ಹಾಗೂ ಉಡುಪಿ- ಚಿಕ್ಕ ಮಗಳೂರು ಲೋಕ ಸಭಾ ಕ್ಷೇತ್ರ ) ವ್ಯಾಪ್ತಿಗೆ ಬರುವುತ್ತಿದ್ದು, ಕ್ಷೇತ್ರ ಗಡಿ ಸಮಸ್ಯೆ ಸೇತುವೆ ರಚನೆಗೆ ತೊಡಕಾಗಿರಬಹುದೇ ಎಂದು ಜನರಾಡಿಕೊಳ್ಳುತ್ತೀದ್ದಾರೆ.

ಇನ್ನಾದರೂ ಈ ಭಾಗದ ಜನಪ್ರತಿನಿಧಿಗಳು, ಕೋಡಿ, ಮರವಂತೆ, ಕನ್ನಡಕುದ್ರು, ಆನಗಳ್ಳಿ ಸೇತುವೆ ರಚನೆಗೆ ಪ್ರಯತ್ನ ಪಟ್ಟಂತೆ, ಸೌಡ – ಶಂಕರನಾರಾಯಣ ಸೇತುವೆ ರಚನೆ ಬಗ್ಗೆ ಕೊಡಲೇ ಕ್ರಮಕೈಗೊಂಡು, ಈ ಭಾಗದ ಜನರಿಗೆ ಅನುಕೂಲ ಮಾಡಿ ಕೊಡಬೇಕೆಂದು ಸ್ಥಳೀಯರ ಆಗ್ರಹವಾಗಿದೆ.

Call us

Leave a Reply

Your email address will not be published. Required fields are marked *

8 − 1 =