ಸೌಡ ಶ್ರೀ ವೀರಾಂಜನೇಯ ವಿಗ್ರಹದಲ್ಲಿ ಸಂಸ್ಕ್ರತ ಭಾಷೆಯ ದೇವನಾಗರಿ ಲಿಪಿ ಪತ್ತೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬಿದ್ಕಲ್ಕಟ್ಟೆ ಸಮೀಪದ ಹಾದ೯ಳ್ಳಿ ಮಂಡಳ್ಳಿ ಗ್ರಾಮದ ಸೌಡ ಪ್ರದೇಶದ ವಾರಾಹಿ ನದಿ ತಟದ ವಿಜಯನಗರ ಕಾಲದ ಶ್ರೀ ವೀರಾಂಜನೇಯ ವಿಗ್ರಹದಲ್ಲಿ ಸಂಸ್ಕ್ರತ ಭಾಷೆಯ ದೇವನಾಗರಿ ಲಿಪಿ ಪತ್ತೆಯಾಗಿದೆ.

Click Here

Call us

Call us

ವಿಗ್ರಹದ ಪೀಠದಲ್ಲಿ ತಲೆಕೆಳಗಾಗಿ ಬರವಣಿಗೆ ಕಂಡು ಬಂದಿದ್ದು, 4 ಅಡ್ಡ ಪಟ್ಟಿಕೆಯಲ್ಲಿ ಶ್ರೀ ವೀರಾಂಜನೇಯರ ಮಂತ್ರಗಳನ್ನು ಒಳಗೊಂಡ ಸಂಸ್ಕ್ರತ ಭಾಷೆಯ ದೇವನಾಗರಿ ಲಿಪಿಯನ್ನು ಕಾಣಬಹುದಾಗಿದೆ. ಕೆಲವೊಂದು ಅಕ್ಷರ ಅಸ್ಪಷ್ಠವಾಗಿ ಕಾಣಲ್ಪಟ್ಟಿದ್ದು, ಸಂಪೂಣ೯ ಅಧ್ಯಯನದ ಬಳಿಕ ಮಾಹಿತಿ ಲಭ್ಯವಾಗಲಿದೆ.

Click here

Click Here

Call us

Visit Now

ದೇವಾಲಯದ ಎದುರಿನ ಮಂಟಪದಲ್ಲಿ ವ್ಯಕ್ತಿಯ ಶಿಲ್ಪಕಲೆ ಕೆತ್ತಲಾಗಿದ್ದು ಇದರೊಂದಿಗೆ “ಮುದ್ರಾಡಿ ಅನಂತಯ್ಯ” ಎಂದು ಬರವಣಿಗೆ ಕಂಡುಬಂದಿದೆ.

ಸೌಡದಲ್ಲಿ ಶ್ರೀ ವೀರಾಂಜನೇಯ ಎಂದು ಕರೆಸಿಕೊಳ್ಳುವ ಶ್ರೀ ಆಂಜನೇಯ ವಿಗ್ರಹವು ಸುಮಾರು 4 ಅಡಿ ಎತ್ತರವಿದೆ. ಶ್ರೀ ದೇವರ ಮಧ್ಯೆ ಪಟ್ಟಿಕೆಯಲ್ಲಿ ಖಡ್ಗವನ್ನು ತೋರಿಸುವುದರ ಮೂಲಕ ವೀರತ್ವವವನ್ನು ಇಲ್ಲಿ ಗಮನಿಸಬಹುದಾಗಿದೆ. ಹಾಗೆ ಬಾಲದಲ್ಲಿ ಘಂಟೆ, ಎಡಕೈಯ ಮಧ್ಯೆ ಭಾಗದಿಂದ ಗಧೆಯನ್ನು ತೋರಿಸಲಾಗಿದೆ. ಬಲ ಕೈ ಅಭಯ ಹಸ್ತ ನೀಡಿದರೆ, ಎಡ ಕೈ ಎಡ ಕಾಲ ಮೇಲೆ ಇಟ್ಟಿರುವುದನ್ನು ನಾವು ನೋಡಬಹುದು. ಇಲ್ಲಿ ವಾರಾಹಿ ನದಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವುದನ್ನು ನಾವು ಗಮನಿಸಬಹುದು.

ಈ ದೇವನಾಗರಿ ಲಿಪಿಯನ್ನು ಪ್ರದೀಪ ಕುಮಾರ್ ಬಸ್ರೂರು ಇವರು ಜಯಕರ ಜೋಗಿ, ಸಚಿನ್ ಕಕ್ಕುಂಜೆ, ಮಹಾಬಲೇಶ್ವರ ಬಾಯರಿ, ಸುಮುಖ ಬಾಯರಿ ಇವರ ಸಹಕಾರದಲ್ಲಿ ಪತ್ತೆ ಹಚ್ಚಲಾಯಿತು. ಇವರಿಗೆ ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್ ಮುಖ್ಯಸ್ಥರು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಕನಾ೯ಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಕ್ತಗಂಗೋತ್ರಿ ಮೈಸೂರು ಇವರು ಮಾಗ೯ದಶ೯ನ ನೀಡುತ್ತಿದ್ದಾರೆ.

Call us

 

Leave a Reply

Your email address will not be published. Required fields are marked *

ten − eight =